ವೀರಾಜಪೇಟೆ, ಫೆ. 14: ವೀರಾಜಪೇಟೆಯ ಅರಮೇರಿ ಅಕಾಡೆಮಿಕ್ ಸೆಂಟ್ರಲ್ ಎಜುಕೇಷನ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಆಯೋಜಿಸಿದ್ದ ಅನುಭವಾತ್ಮಕ ಕಲಿಕೆ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಚಟುವಟಿಕೆ ಮೂಲಕ ಗಮನ ಸೆಳೆದರು.
2019-20ನೇ ಸಾಲಿನ ಅನುಭವಾತ್ಮಕ ಕಲಿಕಾ ತರಬೇತಿಯಲ್ಲಿ ಕಲಿತ ವಿಚಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ಅನಾವರಣಗೊಳಿಸಿದರು. 1ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡರು. ಪಠ್ಯೇತರವಾಗಿ ಕಲಿತ ವಿಷಯವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಯೂರೋಕಿಡ್ ಪ್ರಾಂಶುಪಾಲೆ ಪ್ರತಿಮಾ, ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಮೂರ್ನಾಡು ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾದ ಹರೀಶ್, ನವೀನ್, ಅರಮೇರಿ ಅಕಾಡೆಮಿಕ್ ಸೆಂಟ್ರಲ್ ಎಜುಕೇಷನ್ ಪ್ರಾಂಶುಪಾಲೆ ಕೆ.ಪಿ. ಕುಸುಮ್ ಪಾಲ್ಗೊಂಡಿದ್ದರು.