ಆಲೂರು ಸಿದ್ದಾಪುರ, ಫೆ. 14: ರೈತರು ದೇಶೀಯ ವಿವಿಧ ತಳಿಯ ರಾಸುಗಳನ್ನು ಸಾಕಾಣಿಕೆ ಮಾಡುವುದರ ಮೂಲಕ ಹಾಲು ಉತ್ಪಾದನೆಯಲ್ಲಿ ಪ್ರಗತಿಹೊಂದಿ ಆರ್ಥಿಕವಾಗಿ ಸಬಲರಾಗಿರಿ ಎಂದು ಸೋಮವಾರಪೇಟೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಕೆ. ನಾಗರಾಜ್ ರೈತರಿಗೆ ಸಲಹೆ ನೀಡಿದರು.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಪಶು ಪಾಲನೆ ಮತ್ತು ಪಶು ವೈದ್ಯಾ ಇಲಾಖೆ, ಆಲೂರು-ಸಿದ್ದಾಪುರ ಪಶು ಚಿಕಿತ್ಸಾಲಯ ಮತ್ತು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹಾಗೂ ಆಲೂರು ಸಿದ್ದಾಪುರ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಕಡಲೆಮಕ್ಕಿ ಗ್ರಾಮದ ಗಣಪತಿ ದೇವಸ್ಥಾನ ಹತ್ತಿರ ಹಮ್ಮಿಕೊಂಡಿದ್ದ ಉಚಿತ ಪಶು ಚಿಕಿತ್ಸಾ ಶಿಬಿರ ಹಾಗೂ ರಾಷ್ಟ್ರೀಯ ಕೃತಕ ಗರ್ಭಧಾರಣಾ ಯೋಜನೆ ಮತ್ತು ತಾಂತ್ರಿಕ ಮಾಹಿತಿ ಕಾರ್ಯಾಗಾರದಲ್ಲಿ ಅವರು ರೈತರಿಗೆ ಮಾಹಿತಿ ನೀಡಿದರು.
ರೈತರು ರಾಸುಗಳ ಆರೋಗ್ಯ ಮತ್ತು ಸ್ವಚ್ಛತೆ ಹಾಗೂ ಆಹಾರದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ರಾಸುಗಳಿಗೆ ಚಿಕಿತ್ಸೆ ನೀಡುವುದು, ರಾಸುಗಳಿಗೆ ಒಣ ಮತ್ತು ಹಸಿ ಹುಲ್ಲು ಹಸಿಸೊಪ್ಪನ್ನು ಆಹಾರವಾಗಿ ಕೊಡುವುದರ ಮೂಲಕ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತದೆ. ಇದರಿಂದ ಸ್ಥಳೀಯ ಹಾಲು ಉತ್ಪಾದಕರ ಸಂಘ ಅಭಿವೃದ್ಧಿ ಯಾಗುವುದರ ಜೊತೆಯಲ್ಲಿ ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸಬಹುದು ಎಂದು ಸಲಹೆ ನೀಡಿದರು.
ತಾ.ಪಂ. ಸದಸ್ಯೆ ಲೀಲಾವತಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ರೈತರು ರಾಸುಗಳ ಸಾಕಾಣಿಕೆಯತ್ತ ಹೆಚ್ಚಿನ ಆಸಕ್ತಿ ತೋರಬೇಕು. ಹಾಲು ಉತ್ಪಾದನೆ ಯಿಂದ ಹೆಚ್ಚಿನ ಲಾಭಗಳಿಸುವ ನಿಟ್ಟಿನಲ್ಲಿ ರೈತರು ದೇಶೀಯ ತಳಿಯ ರಾಸುಗಳನ್ನು ಸಾಕಾಣಿಕೆ ಮಾಡುವ ಮೂಲಕ ಹೈನುಗಾರಿಕೆಯಲ್ಲಿ ಆರ್ಥಿಕವಾಗಿ ಪ್ರಗತಿ ಕಾಣುವಂತೆ ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ರೈತರು ಜಾನುವಾರುಗಳನ್ನು ಸಾಕುವುದನ್ನು ಕಡಿಮೆ ಮಾಡುತ್ತಿರುವ ದಿನದಲ್ಲಿ ಆಲೂರು ಸಿದ್ದಾಪುರ ಗ್ರಾಮ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ತಳಿಯ ರಾಸುಗಳನ್ನು ಸಾಕಾಣಿಕೆ ಮಾಡಿ ಹಾಲು ಉತ್ಪಾದನೆಯಲ್ಲಿ ರೈತರು ಲಾಭಗಳಿಸುತ್ತಿರುವುದು ಶ್ಲಾಘನಿಯ ಮತ್ತು ಇತರ ಗ್ರಾಮಗಳಿಗೆ ಮಾದರಿಯಾಗಿದೆ ಎಂದರು.
ಆಲೂರು ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷೆ ಸತ್ಯ ಅಧ್ಯಕ್ಷತೆ ವಹಿಸಿದ್ದರು. ಆಲೂರು ಸಿದ್ದಾಪುರ ಪಶು ವೈದ್ಯಾಧಿಕಾರಿ ಡಾ. ಶೈಲಜ ನಾಗರಾಜ್, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಕಾಂತಿ ಚಂಗಪ್ಪ, ಉಪಾಧ್ಯಕ್ಷೆ ಬಿ.ಸಿ. ಸರೋಜ, ಕಾರ್ಯದರ್ಶಿ ಶೈಲ ಸತೀಶ್, ಗ್ರಾ.ಪಂ. ಪಿಡಿಒ ಪೂರ್ಣಿಮಾ, ಸದಸ್ಯರಾದ ಟಿ.ಪಿ. ವಿಜಯ್, ಸರಸ್ವತಿ, ಪಶು ವೈದ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು. ಈ ಸಂದರ್ಭ ರೈತರ ನೂರಾರು ರಾಸುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಯಿತು.
ಆಲೂರು ಸಿದ್ದಾಪುರದಲ್ಲಿ ಉಚಿತ ಪಶು ಚಿಕಿತ್ಸಾ ಶಿಬಿರ