ಸೋಮವಾರಪೇಟೆ, ಫೆ. 13: ಆಲೂರು-ಸಿದ್ದಾಪುರ ಗ್ರಾಮದ ಎಪಿಎಲ್ ಫ್ರೆಂಡ್ಸ್ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ಹೊನಲು ಬೆಳಕಿನ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಟಿ.ಪಿ. ಜೀವನ್ ತಿಳಿಸಿದ್ದಾರೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ. 21 ರ ಸಂಜೆ 7 ಗಂಟೆಗೆ ಪಂದ್ಯಾಟಕ್ಕೆ ಚಾಲನೆ ನೀಡಲಾಗುವದು. ಪ್ರಥಮ ಬಹುಮಾನವಾಗಿ ರೂ. 30 ಸಾವಿರ ನಗದು, ದ್ವಿತೀಯ ರೂ. 15 ಸಾವಿರ ಹಾಗೂ ತೃತೀಯ ಬಹುಮಾನ ರೂ. 5 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಗುವದು.

ಇದರೊಂದಿಗೆ ಉತ್ತಮ ಹೊಡೆತಗಾರ, ತಡೆತ ಆಟಗಾರ ಹಾಗೂ ರಕ್ಷಣಾತ್ಮಕ ಆಟಗಾರ ಬಹುಮಾನ ನೀಡಲಾಗುವದು. ಮೊದಲು ಬಂದ 20 ತಂಡಗಳಿಗೆ ಮಾತ್ರ ಅವಕಾಶವಿದ್ದು, ತಂಡಗಳನ್ನು ನೋಂದಾಯಿಸಿಕೊಳ್ಳಲು ತಾ. 19 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9113076102, 948326876ನ್ನು ಸಂಪರ್ಕಿಸಬಹುದಾಗಿದೆ.