ಶನಿವಾರಸಂತೆ, ಫೆ. 13: ಸಮೀಪದ ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್‍ನ ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಮಜ್ಲಿಸುನ್ನೂರ್ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಪ್ರವಚನ ತಾ. 15 ರಿಂದ 17 ರವರೆಗೆ ರಾತ್ರಿ 8 ಗಂಟೆಯಿಂದ ಶಂಸುಲ್ ಉಲಾಮ ಮೈದಾನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಬಹು ಅಶ್ರಫ್ ಮಿಸ್ಸಾಹಿ ಉದ್ಘಾಟಿಸಲಿದ್ದಾರೆ. ಕೇರಳದ ಇರ್ಟಿಯ ಮೂಸ ಮುಸ್ಲಿಯಾರ್ ಇಮಾಂ ಮಹದಿ ವಿಷಯದ ಬಗ್ಗೆ ಪ್ರವಚನ ನೀಡಲಿದ್ದು, ಇಬಾದ್ ಕಾರ್ಯದರ್ಶಿ ಇಬ್ರಾಹಿಂ ಬಾತಿಷ ಶಂಸಿ ಭಾಗವಹಿಸುವರು. ತಾ. 17 ರಂದು ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಕೆ.ಎಸ್.ಎಸ್.ಎಫ್. ಕೊಡ್ಲಿಪೇಟೆ ಶಾಖೆ ಅಧ್ಯಕ್ಷ ಇಬ್ರಾಹಿಂ ಮಲ್ಲಳ್ಳಿ ವಹಿಸಲಿದ್ದಾರೆ.