ಪಾಲಿಬೆಟ್ಟ, ಫೆ. 13: ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಐದು ವರ್ಷದ ಅವಧಿಯ ನೂತನ ಅಧ್ಯಕ್ಷರಾಗಿ ಅಜ್ಜಿನಿಕಂಡ ಶ್ಯಾಂಚಂದ್ರ ಹಾಗೂ ಉಪಾಧ್ಯಕ್ಷರಾಗಿ ಕೊಲ್ಲಿರ ಧರ್ಮಜರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾ. 28-01-2020ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 13 ಅಭ್ಯರ್ಥಿಗಳು ಜಯಶೀಲರಾಗಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರುಗಳಾಗಿದ್ದಾರೆ. ಅಜಿತ್ ಕರುಂಬಯ್ಯ, ಅನಿತಾ ಸುರೇಶ್, ವಿ.ವಿ. ಡಾಲು, ಮಾಳೇಟಿರ ಪವಿತ್ರ, ಪಿ.ಸಿ. ತಮ್ಮಯ್ಯ, ಸಿ.ಎಲ್. ಸೋಮೇಶ್, ಹೆಚ್.ಕೆ. ದಿನೇಶ್, ಪುಲಿಯಂಡ ಶೋಭ, ಜೆ ಕೆ ಸುಭಾಷಿಣಿ, ಬಿ.ಡಿ. ಗಣೇಶ್, ಟಿ ಕೆ ಯಶೋಧರನ್ ಆಯ್ಕೆಯಾದ ನಿರ್ದೇಶಕರುಗಳು.
ಹಾಲಿ ಅಧ್ಯಕ್ಷ ವಿಜು ಸುಬ್ರಮಣಿ ಮಾತನಾಡಿ ಸಂಘವು ಹಲವು ರೀತಿಯ ವ್ಯಾಪಾರ ವಹಿವಾಟು ಹಾಗೂ ರೈತರಿಗೆ ಪ್ರಯೋಜನವಾಗು ವಂತಹ ಕೆಲಸ ಕಾರ್ಯಗಳನ್ನು ಇದುವರೆಗೆ ನಡೆಸಿ ಕೊಂಡು ಬಂದಿದ್ದು ಇನ್ನುಮುಂದೆ ಕೂಡ ನೂತನ ತಂಡವು ಉತ್ತಮ ಕೆಲ ಕಾರ್ಯಗಳನ್ನು ಮಾಡುವುದರೊಂದಿಗೆ ಮುಂದೆ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸುವಂತೆ ಆಗಲಿ ಎಂದು ಆಶಿಸಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷÀ ಶ್ಯಾಂಚಂದ್ರ ರವರು ಮಾತನಾಡಿ 13 ಜನರ ತಂಡ ಒಂದು ಕುಟುಂಬದ ಸದಸ್ಯರಂತೆ ಇದ್ದು ಸಂಘವನ್ನು ಉತ್ತಮವಾಗಿ ಕೊಂಡೊಯ್ಯಲು ಸಹಕಾರ ಮಾಡುವಂತೆ ನಿರ್ದೇಶಕರುಗಳಲ್ಲಿ ಮನವಿ ಮಾಡಿಕೊಂಡರು. ಅದೇ ರೀತಿಯಲ್ಲಿ ಸಿಬ್ಬಂದಿ ವರ್ಗ ಕೂಡ ಎಲ್ಲಾ ರೀತಿಯ ಸಹಕಾರವನ್ನು ನೀಡುವುದರೊಂದಿಗೆ ಸಂಘದ ಬೆಳವಣಿಗೆಗೆ ಪ್ರಯತ್ನ ಪಡಬೇಕಾಗಿ ಈ ಸಂದರ್ಭ ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಪ್ರತಿನಿಧಿಯಾಗಿ ನಿರ್ದೇಶಕ ಅಜಿತ್ ಕರುಂಬಯ್ಯರವರನ್ನು ಈ ಸಂದರ್ಭದಲ್ಲಿ ಶಿಫಾರಸ್ಸು ಮಾಡ ಲಾಯಿತು. ಚುನಾವಣೆ ಅಧಿಕಾರಿ ಯಾಗಿ ವೀರಾಜಪೇಟೆ ತಾಲೂಕು ಸಹಕಾರ ಬ್ಯಾಂಕಿನ ಅಧಿಕಾರಿ ಮೋಹನ್ ಮತ್ತು ಪಾಲಿಬೆಟ್ಟ ಬ್ಯಾಂಕಿನ ಕಾರ್ಯ ನಿರ್ವಹಣಾಧಿ ಕಾರಿ ಕೆ.ಎ. ಶಶಿಕಲಾ ಕಾರ್ಯನಿರ್ವ ಹಿಸಿದರು. ಈ ಸಂದರ್ಭ ಗ್ರಾ.ಪಂ. ಸದಸ್ಯ ದೀಪಕ್ ಗಣಪತಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಕುಟ್ಟಂಡ ವಸಂತ್ ಉಪಸ್ಥಿತರಿದ್ದರು. -ಪುತ್ತಂ ಪ್ರದೀಪ್