ಮಡಿಕೇರಿ, ಫೆ.13: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕಕ್ಕಬ್ಬೆ ನಾಲ್‍ನಾಡ್ ಕುಡಿಯ ಮಂದ್ ನಮ್ಮೆ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ತಾ. 15 ರಂದು ಬೆಳಗ್ಗೆ 10 ಗಂಟೆಗೆ ಯವಕಪಾಡಿ ಕುಡಿಯಡ ಮಂದ್‍ನಲ್ಲಿ ಕುಡಿಯಡ ಮಂದ್ ನಮ್ಮೆ-2020 ಕಾರ್ಯಕ್ರಮ ನಡೆಯಲಿದೆ.
ಮಂದ್‍ನಮ್ಮೆ ಸಮಿತಿ ಅಧ್ಯಕ್ಷ ಕೋಲಿಂದಮಲೆ ಎ.ಬೋಪಯ್ಯ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಮಡಿಕೇರಿ ತಾ.ಪಂ. ಮಾಜಿ ಸದಸ್ಯ ಬಾಚಮಂಡ ರಾಜ ಪೂವಣ್ಣ, ಕುಂಜಿಲ ಅಮ್ಮಂಗೇರಿ ಸುಬ್ರಹ್ಮಣ್ಯ ಯುವಕ ಸಂಘದ ಅಧ್ಯಕ್ಷÀ ಪೊಂಞರ ಉಲ್ಲಾಸ, ಕುಂಜಿಲ ಗ್ರಾಮ ನಿವೃತ್ತ ಉಪಾಧ್ಯಾಯ ಕೈಬುಲಿರ ರಾಮಯ್ಯ, ಯವಕಪಾಡಿ ತಾಮರ ರೆಸಾರ್ಟ್‍ನ ವ್ಯವಸ್ಥಾಪಕ ಕಲಿಯಾಟಂಡ ಗಿರೀಶ್, ಯವಕಪಾಡಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕಾಪಾಳರ ತಮ್ಮಯ್ಯ ಪಾನ ಇತರರು ಪಾಲ್ಗೊಳ್ಳಲಿದ್ದಾರೆ.
ನಂತರ ಕೋಲಾಟ್, ಬೊಳಕಾಟ್, ಉಮ್ಮತ್ತಾಟ್, ಉರ್‍ಟಿಕೊಟ್ಟ್ ಆಟ್, ಕತ್ತಿಯಾಟ್, ಪರಿಯಕಳಿ, ಕಪ್ಪೆಆಟ್, ಕಥೆ, ಕವನ, ಒಂಟಿ ನಟನೆಲ್ ಭಾಗವಹಿಸುವವರಿಗೆ ಮುಕ್ತ ಅವಕಾಶ ಇದೆ.
ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷÀ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಮಡಿಕೇರಿ ತಾ.ಪಂ. ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಕುಂಜಿಲ ಕಕ್ಕಬೆ ಗ್ರಾ.ಪಂ. ಅಧ್ಯಕ್ಷೆÀ ಕರ್ತಂಡ ಶೈಲಾ ಕುಟ್ಟಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಐಮುಡಿಯಂಡ ರಾಣಿ ಮಾಚಯ್ಯ, ಜಾನಪದ ಕಲಾವಿದರಾದ ಕೋಲಿಂದಮಲೆ ಎ.ಚಿಣ್ಣಪ್ಪ, ಅಂಜಪರವಂಡ ಸಿ.ಚೋಮಣಿ ಇತರರು ಪಾಲ್ಗೊಳ್ಳಲಿದ್ದಾರೆ.