*ಗೋಣಿಕೊಪ್ಪಲು, ಫೆ. 13: ಅರಮೇರಿ ಭಗವತಿ ದವಸ ಭಂಡಾರದ ಅಧ್ಯಕ್ಷರಾಗಿ ಬಾಚೀರ ಜಿ. ಬೆಳ್ಯಪ್ಪ ಆಯ್ಕೆಯಾಗಿದ್ದಾರೆ.

2020-25ನೇ ಸಾಲಿನ 5 ವರ್ಷಗಳ ಅವಧಿಗೆ ಈ ಆಯ್ಕೆ ನಡೆದಿದೆ. ಮಂಗಳವಾರ ದವಸ ಭಂಡಾರ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಬಹುಮತಗಳನ್ನು ಪಡೆದು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪೂಳಂಡ ಎಸ್. ಮಾಚಯ್ಯ (ರಾಮು) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿಯಾಗಿ ಹೆಚ್.ಯು ಚಂದ್ರ ಕಾರ್ಯ ನಿರ್ವಹಿಸಿದರು.