ಕರಿಕೆ, ಫೆ. 13: ಕೇರಳದಿಂದ ಎಮ್ಮೆಮಾಡುಕಡೆ ತೆರಳುತ್ತಿದ್ದ ಇನೋವಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕರಿಕೆ ಎಳ್ಳುಕೊಚ್ಚಿ ಬಳಿ ರಸ್ತೆ ಬದಿ ಮಗುಚಿದ ಘಟನೆ ಸಂಭವಿಸಿದೆ. ಮಡಿಕೇರಿ ಮೂಲದ ಇನ್ನೋವಾ ಕಾರು (ಕೆ.ಎ. 01 ಎಂಡಿ 7699) ಕರಿಕೆ ಎಳ್ಳುಕೊಚ್ಚಿ ಸರಕಾರಿ ಪ್ರಥಾಮಿಕ ಶಾಲೆ ಬಳಿ ದಿಢೀರನೆ ಚಾಲಕನ ನಿಯಂತ್ರಣ ಕಳೆದುಕೊಂಡು ಬರೆಗೆ ಅಪ್ಪಳಿಸಿ ರಸ್ತೆ ಬದಿ ಮಗುಚಿ ಬಿದ್ದಿದ್ದು, ಕಾರಿನಲ್ಲಿದ್ದ ಐವರು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.