ಎಂವೈಸಿಸಿ ಕಪ್ -2020

ಮಡಿಕೇರಿ, ಫೆ. 13: ಮರ್ಕರಾ ಯೂತ್ ಕ್ರಿಕೆಟ್ ಕ್ಲಬ್ (ಎಂವೈಸಿಸಿ) ವತಿಯಿಂದ ತಾ. 14 ರಿಂದ (ಇಂದಿನಿಂದ) ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಟಿ-20 ಲೆದರ್‍ಬಾಲ್ ಕ್ರಿಕೆಟ್ ಪಂದ್ಯಾಟ ಜರುಗಲಿದೆ.

ಎಂವೈಸಿಸಿ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾನ್ಯತೆ ಹೊಂದಿರುವ ಕ್ಲಬ್ ಆಗಿದ್ದು; ತಾ. 14 ರಿಂದ 23ರವರೆಗೆ ಎಂವೈಸಿಸಿ ಕಪ್ -2020 ಪಂದ್ಯಾಟ ಏರ್ಪಡಿಸಲಾಗಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದ್ದು; ಎರಡು ಗುಂಪುಗಳಲ್ಲಿ ಪಂದ್ಯಾಟ ನಡೆಯಲಿದೆ.

ವಿಜೇತ ತಂಡಕ್ಕೆ ರೂ 30 ಸಾವಿರ ನಗದು ಹಾಗೂ ಟ್ರೋಫಿ, ರನ್ನರ್ಸ್ ತಂಡಕ್ಕೆ ರೂ. 20 ಸಾವಿರ ನಗದು ಹಾಗೂ ಟ್ರೋಫಿ ಸೇರಿದಂತೆ ವಿವಿಧ ವಿಭಾಗದ ಸಾಧಕರಿಗೆ ಪ್ರತ್ಯೇಕ ಬಹುಮಾನವಿದೆ. ಕಳೆದ ಹಲವು ವರ್ಷಗಳಿಂದ ಎಂವೈಸಿಸಿ ತಂಡ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರುತ್ತಿದೆ. ಈ ಪಂದ್ಯಾವಳಿಯಲ್ಲಿ ಕೊಡಗು ಮೂಲದ ಆಟಗಾರರಿಗೆ ಮಾತ್ರ ಅವಕಾಶವಿದೆ.