ನಾಪೆÇೀಕ್ಲು, ಫೆ. 13: ಕಡಂಗ ಸಮೀಪದ ಅರಪಟ್ಟು-ಪೆÇದವಾಡ ಭಗವತಿ ದೇವಳದ ಮೊದಲನೇ ವಾರ್ಷಿಕ ಪ್ರತಿಷ್ಠಾ ಉತ್ಸವವು ತಾ. 16 ಮತ್ತು 17 ರಂದು ಕ್ಷೇತ್ರ ತಂತ್ರಿ ಗಳಾದ ಬ್ರಹ್ಮಶ್ರೀ ತರುಣ ನಲ್ಲೂರ್ ಪದ್ಮನಾಭನ್ ಉಣ್ಣಿ ನಂಬೂದರಿಪಾಡ್ ಅವರ ನೇತೃತ್ವದಲ್ಲಿ ನಡೆಯಲಿದೆ.
ತಾ. 16 ರಂದು ರಾತ್ರಿ 7 ಗಂಟೆಯಿಂದ ದೀಪಾರಾಧನೆ, ಪ್ರಸಾಧಿ ಶುದ್ಧಿ ಹೋಮ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಕಲಶ ಪೂಜೆ, ಅಸ್ತ್ರ ಕಲಶ ಪೂಜೆ, ವಾಸ್ತು ಕಲಶಾಭಿಷೇಕ, ವಾಸ್ತು ಪುಣ್ಯಾಹ, ಭಗವತಿ ಸೇವಾ, ಸರ್ಪ ಬಲಿ, ಅತ್ತಾಯ ಪೂಜೆ ನಡೆಯಲಿದೆ. ತಾ. 17 ರಂದು ಬೆಳಿಗ್ಗೆ 6 ಗಂಟೆಯಿಂದ ಅಭಿಷೇಕ ನೈವೇದ್ಯ, ಉಷಾ ಪೂಜೆ, ಮಹಾಗಣಪತಿ ಹೋಮ, 9 ಗಂಟೆಗೆ ಮಹಾ ಮೃತ್ಯುಂಜಯ ಹೋಮ, ಬೂತ ಬಲಿ, ಬಿಂಬ ಶುದ್ಧಿ, ಕಲಶ ಪೂಜೆ, ಚತು ಶುದ್ಧಿ ದಾರ, ಪಂಚಗವ್ಯ ಪಂಚಕ, ನಂತರ 25 ಕಲಶ ಪೂಜೆ, ಉದಯಾಸ್ತಮಾನ ಪೂಜೆ, ಕಲಶಾಭಿಷೇಕ, ನಾಗ ಪೂಜೆ, 12 ಗಂಟೆಗೆ ಮಧ್ಯಾಹ್ನದ ಪೂಜೆ, ಉಪದೇವರುಗಳಿಗೆ ಕಲಶ ಪೂಜೆ, ರಾತ್ರಿ ನೈರ್ಮಲ್ಯ ದೀಪಾರಾಧನೆ, ಅತ್ತಾಯ ಪೂಜೆ ನಡೆಯಲಿದೆ.