ಮಡಿಕೇರಿ, ಫೆ. 12: ಕೆಲವು ರೈತರಿಗೆ ಈವರೆಗೆ ಸಾಲ ಮನ್ನಾ ಯೋಜನೆ ತಲುಪಿರುವುದಿಲ್ಲ. ಪ್ರತಿ ವರ್ಷ ಸಹಕಾರ ಸಂಘದಿಂದ ಸಹಕಾರ ಶಿಕ್ಷಣ ನಿಧಿಯನ್ನು ಸಹಕಾರ ಯೂನಿ ಯನ್ ವಸೂಲಿ ಮಾಡುತ್ತಿದ್ದು, ಇದರ ಬಗ್ಗೆ ಗಮನಹರಿಸುತ್ತಿಲ್ಲ. ಇನ್ನಾದರೂ ಸಹಕಾರಿ ರೈತರ ಬಗ್ಗೆ ಗಮನಹರಿಸಬೇಕೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದ್ದಾರೆ.