ಗೋಣಿಕೊಪ್ಪ ವರದಿ, ಫೆ. 12 : ಇಲ್ಲಿನ ನಿವಾಸಿ ಪೈಂಟರ್ ಕೆಲಸ ಮಾಡುತ್ತಿದ್ದ ಬಾಬು (38) ಡಿಸೆಂಬರ್ 30 ರಿಂದ ಕಾಣೆಯಾಗಿದ್ದಾರೆ. ತೆಳ್ಳಗಿನ ಶರೀರ, ಕೋಲುಮುಖ ಹೊಂದಿರುವ ಇವರಿಗೆ ಬಲ ಕೈಯ ಮಧ್ಯ ಭಾಗದ ಬೆರಳು ಇಲ್ಲ. ಕನ್ನಡ, ಉರ್ದು ಮಲಯಾಳಂ ಭಾಷೆ ಮಾತನಾಡುತ್ತಾರೆ. ಹೊರಗೆ ಪೈಂಟಿಂಗ್ ಕೆಲಸಕ್ಕೆ ಹೋದಾಗ ವಾರ ಕಳೆದು ಬರುತ್ತಿದ್ದರು. ಆದರೆ, ಇವರು ಇನ್ನೂ ಬಂದಿಲ್ಲ ಎಂದು ಬಾಬು ಅವರ ಪತ್ನಿ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ತೆಯಾದವರು 08274 247333 ಸಂಖ್ಯೆಗೆ ಮಾಹಿತಿ ನೀಡುವಂತೆ ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.