ಕೂಡಿಗೆ, ಫೆ. 12: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರಿನ ಹೆಸರುಘಟ್ಟ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ನಡೆದ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ತೊರೆನೂರು ಕಾವೇರಿ ಮಾತಾ ರೈತ ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದರು.
ತೊರೆನೂರು ಗ್ರಾಮ ಪಂಚಾಯಿತಿಯ ಶ್ರೀ ಕಾವೇರಿ ಮಾತಾ ರೈತ ಒಕ್ಕೂಟದ ಸುಮಾರು ನಲವತೈದು ಸದಸ್ಯರು ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಪಾಲ್ಗೊಂಡು, ತೋಟಗಾರಿಕಾ ವಿಷಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಒಕ್ಕೂಟದ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಕಾರ್ಯದರ್ಶಿ ಸೋಮಶೇಖರಾಚಾರಿ ಸೇರಿದಂತೆ ಪುರುಷ ರೈತರು ಹಾಗೂ ಮಹಿಳಾ ಪಾಲ್ಗೊಂಡಿದ್ದರು.