ಮಡಿಕೇರಿ, ಫೆ. 12: ಪ್ರಧಾನ ಮಂತ್ರಿಯವರ ಫಿಟ್ ಇಂಡಿಯಾ ಪರಿಕಲ್ಪನೆಗೆ ಪೂರಕವಾಗಿ ಪ್ರಸ್ತುತ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೊಂದಲು ಅರಿವು ಮೂಡಿಸುವ ಸಲುವಾಗಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ದೈಹಿಕ ಶಿಕ್ಷಣ ವಿಭಾಗ ಹಾಗೂ ಕೊಡಗು ಉಪನ್ಯಾಸಕರ ಕ್ರಿಕೆಟ್ ಅಸೋಷಿಯೇಶನ್ ವತಿಯಿಂದ ತಾ. 16 ರಂದು ಜಿಲ್ಲೆಯ ವಿವಿಧ ಇಲಾಖೆ ನೌಕರರಿಗೆ ಕ್ರಿಕೆಟ್ ಪಂದ್ಯಾಟವನ್ನು ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದೆ.