ಮಡಿಕೇರಿ, ಫೆ. 10: ಕರ್ನಾಟಕ ಜಾನಪದ ಕಲೆಯ ಅಭಿವೃದ್ಧಿಗಾಗಿ ನೀಡಿದ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ನೀಡಲಾಗುವ ಜಾನಪದ ಲೋಕ ಪ್ರಶಸ್ತಿಗೆ ವೀರಾಜಪೇಟೆ ತಾಲೂಕು ಚೊಟ್ಟೆಪಾರೆ ಹಾಡಿಯ ಜೆ.ಕೆ. ರಾಮು ಆಯ್ಕೆ ಆಗಿದ್ದಾರೆ. ಕೊಡಗು ಜಿಲ್ಲಾ ಜಾನಪದ (ಮೊದಲ ಪುಟದಿಂದ) ಪರಿಷತ್ ಘಟಕದ ಶಿಫಾರಸ್ಸಿನ ಮೇರೆಗೆ ಜೆ.ಕೆ ರಾಮು ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ. ತಾ.18 ರಂದು ರಾಮನಗರದ ಜಾನಪದ ಲೋಕದಲ್ಲಿ ನಡೆಯುವ ಜಾನಪದ ಲೋಕದ ಬೆಳ್ಳಿಹಬ್ಬ ಆಚರಣೆ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಈ ಹಿಂದೆ ಕೊಡಗು ಜಾನಪದ ಪರಿಷತ್‍ನ ಶಿಫಾರಸ್ಸಿನ ಮೇರೆಗೆ ಬಾಚರಣಿಯಂಡ ಅಪ್ಪಣ್ಣ, ಬೋಟ್ಟೋಳಂಡ ಕಾಶಿ ಅಚ್ಚಯ್ಯ, ಬೈತಡ್ಕ ಜಾನಕಿ, ಸೋರೆ ಬುರುಡೆ ಕಲಾವಿದ ಮರಿ ದಂಪತಿ ಜಾನಪದ ಲೋಕ ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ಪರಿಷತ್‍ನ ಕೊಡಗು ಘಟಕದ ಅಧ್ಯಕ್ಷ ಬಿ.ಜಿ ಅನಂತಶಯನ ತಿಳಿಸಿದ್ದಾರೆ.