ನಾಪೆÇೀಕ್ಲು, ಫೆ. 10: ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡಿ ಯುವ ಜನರನ್ನು ದಾರಿ ತಪ್ಪಿಸುತ್ತಿದ್ದ ಗಾಂಜಾ ವ್ಯಾಪಾರಿ ಕುಂಜಿಲ ಗ್ರಾಮದ ಕೆ.ಯು ಅಶ್ರಫ್ ಎಂಬಾತನನ್ನು ಮಾಲು ಸಮೇತ ಬಂಧಿಸುವಲ್ಲಿ ನಾಪೆÇೀಕ್ಲು ಪೋಲಿಸರು ಯಾಶಸ್ವಿಯಾಗಿದ್ದಾರೆ. ಕುಂಜಿಲ ಗ್ರಾಮದ ಕಕ್ಕಬ್ಬೆ ಇಗ್ಗುತ್ತಪ್ಪ ದೇವಳದ ಬಳಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಾಪೆÇೀಕ್ಲು (ಮೊದಲ ಪುಟದಿಂದ) ಠಾಣಾಧಿಕಾರಿ ಆರ್. ಮಂಚಯ್ಯ ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆಶ್ರಫ್‍ನನ್ನು 300 ಗ್ರಾಂ ನಷ್ಟು ಗಾಂಜಾದೊಂದಿಗೆ ಬಂದಿಸಿ ಆತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡಿದ್ದಾರೆ