ಕರಿಕೆ, ಫೆ. 4: ಚೀನಾದಲ್ಲಿ ಕಾಣಿಸಿಕೊಂಡ ಭೀಕರ ಸಾಂಕ್ರಾಮಿಕ ರೋಗ ಕೊರೊನಾ ವಿರುದ್ಧ ಜಿಲ್ಲಾ ಆರೋಗ್ಯ ಇಲಾಖೆ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಗಡಿಜಿಲ್ಲೆ ಕರಿಕೆಯಲ್ಲಿ ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿ ಡಾ. ಶಿವಕುಮಾರ್ ನೇತೃತ್ವದಲ್ಲಿ ಮಂಜುನಾಥ, ಮಹದೇವಪ್ಪ, ಗುರುಪ್ರಸಾದ್ ತಂಡ ಗ್ರಾಮ ಪಂಚಾಯಿತಿ, ಅಂಗಡಿ ಮುಂಗಟ್ಟು, ಕೆಲವು ಮನೆಗಳಿಗೆ ತೆರಳಿ ರೋಗ ಲಕ್ಷಣಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿ ಕರಪತ್ರಗಳನ್ನು ಹಂಚಿದರು. ಅಲ್ಲದೆ ಈ ಬಗ್ಗೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರು ಮನೆ ಮನೆ ತೆರಳಿ ಜಾಗೃತಿ ಮೂಡಿಸಿದರು.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ಸಮೀಪದ ಕೇರಳ ರಾಜ್ಯದ ಕಾಸರಗೋಡುವಿನಲ್ಲಿ ಈ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಗಡಿ ಗ್ರಾಮಗಳಾದ ಕರಿಕೆ, ಕುಟ್ಟ, ಮಾಕುಟ್ಟಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.

-ಹೊದ್ದೆಟ್ಟಿ ಸುಧೀರ್