ಮಡಿಕೇರಿ, ಫೆ. 1: 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ರೂ. 1000 ದಿಂದ 5,700 ರೂ.ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ, ಪಿಯುಸಿ ಯಿಂದ ಪಿಹೆಚ್.ಡಿ. ವರೆಗಿನ ವಿದ್ಯಾರ್ಥಿಗಳಿಗೆ ರೂ. 5 ಸಾವಿರ ದಿಂದ 15 ಸಾವಿರ ರೂ.ವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ, ಅಲ್ಪಸಂಖ್ಯಾತರ ಕಾನೂನು ಪದವೀಧರರಿಗೆ ತರಬೇತಿ ಮತ್ತು ಶಿಷ್ಯವೇತನದಂತೆ ಮಾಸಿಕ ರೂ. 5 ಸಾವಿರ ರಂತೆ 4 ವರ್ಷಗಳವರೆಗೆ ಶಿಷ್ಯವೇತನ ನೀಡಲಾಗುತ್ತದೆ, ತಾಂತ್ರಿಕ ಮತ್ತು ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿವೇತನದಡಿಯಲ್ಲಿ ರೂ. 5 ಸಾವಿರದಿಂದ 25 ಸಾವಿರ ರೂವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ, ಪಿಯುಸಿ ಯಿಂದ ಪಿಹೆಚ್.ಡಿ. ವರೆಗಿನ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವನ್ನು ನೀಡಲಾಗುತ್ತಿದೆ.

ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 2 ವರ್ಷಗಳ ಪದವಿಗೆ ಗರಿಷ್ಠ ರೂ. 20 ಲಕ್ಷ ಸಹಾಯ ಧನವನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತಿದೆ. ಮೆಟ್ರಿಕ್ ಪೂರ್ವ/ನಂತರದ ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿ ವೇತನದಡಿಯಲ್ಲಿ ಜೈನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ, ಶುಲ್ಕ ವಿನಾಯಿತಿ ಯೋಜನೆಯಡಿಯಲ್ಲಿ ಎಸ್‍ಎಸ್‍ಎಲ್‍ಸಿ ನಂತರದ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕ ಭರಿಸಲಾಗುವುದು.

‘ವಿದ್ಯಾಸಿರಿ’ ಯೋಜನೆಯಲ್ಲಿ ಮಾಸಿಕ ರೂ. 1500 ದಂತೆ 10 ತಿಂಗಳಿಗೆ ರೂ. 15 ಸಾವಿರಗಳನ್ನು (ಎಸ್.ಎಸ್.ಎಲ್.ಸಿ ನಂತರದ ವಿದ್ಯಾರ್ಥಿಗಳಿಗೆ) ನೀಡಲಾಗುತ್ತಿದೆ, ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಶೇ. 90 ಅಥವಾ 95ಕ್ಕಿಂತ ಹೆಚ್ಚು ಅಂಕ ಪಡೆದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ, ಅಲ್ಪಸಂಖ್ಯಾತರ ಐ.ಟಿ.ಐ. ಮತ್ತು ಡಿಪ್ಲೋಮ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಮಾಸಿಕ ರೂ. 150 ರಂತೆ ತರಬೇತಿ ಭತ್ಯೆ ನೀಡಲಾಗುವುದು.

ಎಂ.ಫಿಲ್ ಹಾಗೂ ಪಿಹೆಚ್.ಡಿ. ವಿದ್ಯಾರ್ಥಿಗಳಿಗೆ ಮಾಸಿಕ ರೂ. 25 ಸಾವಿರ ಹಾಗೂ ವಾರ್ಷಿಕ ರೂ. 10 ಸಾವಿರಗಳನ್ನು ನಿರ್ವಹಣಾ ವೆಚ್ಚ ಸಹಾಯಧನ ನೀಡಲಾಗುವುದು, ಐಐಟಿ, ಎನ್.ಐ.ಟಿ., ಐ.ಐ.ಎಂ.ಎಸ್, ಐ.ಎಲ್.ಯು ನಂತಹ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಗರಿಷ್ಠ 2 ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ, ಜಿ.ಎನ್.ಎಂ/ಬಿಎಸ್ಸಿ ನರ್ಸಿಂಗ್ ಮತ್ತು ಪ್ಯಾರಮೆಡಿಕಲ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ರೂ.35 ಸಾವಿರ ಶಿಷ್ಯವೇತನವಾಗಿ ನೀಡಲಾಗುತ್ತದೆ, ಡಿ.ಎಡ್ ಮತ್ತು ಬಿ.ಎಡ್ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.25 ಸಾವಿರಗಳ ಪ್ರೋತ್ಸಾಹಧನ ನೀಡಲಾಗುವುದು,

ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಪತ್ರಿಕೋದ್ಯಮ ಮತ್ತು ಸಂವಹನ ತರಬೇತಿಗೆ ಮಾಸಿಕ ರೂ. 10,000 ಸಹಾಯಧನ ಯೋಜನೆ 3 ತಿಂಗಳಿನಿಂದ 1 ವರ್ಷದವರೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಅಲ್ಪಸಂಖ್ಯಾತರ ಶಾಲೆಗಳಿಗೆ ಕಲಿಕೆ ಮತ್ತು ಬೋಧನಾ ಸಾಮಗ್ರಿಗಳ ಪೂರೈಸುವ ನಿಟ್ಟಿನಲ್ಲಿ ಪ್ರತಿ ಶಾಲೆಗೆ ಒಂದು ಬಾರಿಗೆ ಪುಸ್ತಕ, ಬೋಧನಾ ಸಾಮಾಗ್ರಿಗಳಿಗಾಗಿ ರೂ.10 ಸಾವಿರ ವನ್ನು ಸಹಾಯಧನವಾಗಿ ನೀಡಲಾಗುತ್ತದೆ. ಜಿಲ್ಲಾಮಟ್ಟದಲ್ಲಿ ರೂ.1 ಕೋಟಿ ಹಾಗೂ ತಾಲೂಕು ಮಟ್ಟದಲ್ಲಿ ರೂ.50 ಲಕ್ಷ ಗರಿಷ್ಠ ಸಹಾಯಧನವನ್ನು ಶಾದಿಮಹಲ್/ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನವಾಗಿ ನೀಡಲಾಗಿದೆ.

ಕ್ರೈಸ್ತ ಸಮುದಾಯ ಭವನ, ಚರ್ಚ್ ದುರಸ್ತಿಗೆ ಸಹಾಯಧನವನ್ನು ನೀಡಲಾಗುತ್ತದೆ, ಜೈನ್ ಮಂದಿರ ದುರಸ್ತಿ ಮತ್ತು ಜೀರ್ಣೋದ್ಧಾರಕ್ಕೆ ಸಹಾಯಧನವನ್ನು ನೀಡಲಾಗುತ್ತದೆ ‘ಬಿದಾಯಿ’ ಯೋಜನೆಯಡಿಯಲ್ಲಿ ಬಡ ಹೆಣ್ಣು ಮಕ್ಕಳಿಗೆ ವಿವಾಹ ನಿಮಿತ್ತ ರೂ. 50 ಸಾವಿರ ಸಹಾಯಧನವನ್ನು ನೀಡಲಾಗುತ್ತದೆ, ಕೆ.ಎ.ಎಸ್, ಯು.ಪಿ.ಎಸ್.ಸಿ, ಬ್ಯಾಂಕಿಂಗ್ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಕೌಶಲ್ಯ ತರಬೇತಿ ಯೋಜನೆಯಲ್ಲಿ ವಿವಿಧ ಕೋರ್ಸುಗಳಲ್ಲಿ ಕಂಪ್ಯೂಟರ್ ತರಬೇತಿಯನ್ನು ನೀಡಲಾಗಿದೆ.

ವೃತ್ತಿಪರ ತರಬೇತಿಯಾದ ಫ್ಯಾಷನ್ ಡಿಸೈನಿಂಗ್, ಎಲೆಕ್ಟ್ರಿಕಲ್ ರಿಪೇರಿ, ಇನ್ನಿತರ ವೃತ್ತಿ ಸಂಬಂಧಿತ ತರಬೇತಿಯನ್ನು ನೀಡಲಾಗುವುದು, ಮದರಸಗಳ ಮೂಲಭೂತ ಸೌಲಭ್ಯಕ್ಕೆ ಸಹಾಯಧನ ಯೋಜನೆಯಲ್ಲಿ ಕಂಪ್ಯೂಟರ್ ಲ್ಯಾಬ್, ಶೌಚಾಲಯ, ಕೊಠಡಿ ನಿರ್ಮಾಣಕ್ಕೆ ಸಹಾಯಧನವನ್ನು ನೀಡಲಾಗುತ್ತದೆ, ಕಾಲೋನಿ ಅಭಿವೃದ್ಧಿ ಯೋಜನೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ಕಾಲೋನಿಗಳಲ್ಲಿ ಸಿಸಿ ರಸ್ತೆ, ಚರಂಡಿ ಮತ್ತು ಶೌಚಾಲಯಗಳ ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಅಜಾದ್ ಭವನ, ಗ್ರಾಮೀಣ ಪೊಲೀಸ್ ಠಾಣೆ ಹತ್ತಿರ, ಮಡಿಕೇರಿ, ದೂ. 08272-220214/225528, ಇmಚಿiಟ:ಜomಟಿಞoಜಚಿgu@gmಚಿiಟ.ಛಿom, Websiಣe:ತಿತಿತಿ.goಞಜom.ಞಚಿಡಿ.ಟಿiಛಿ.iಟಿನ್ನು ಸಂಪರ್ಕಿಸಬಹುದು.