ಮಡಿಕೇರಿ, ಫೆ. 2: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರೆಡ್ ರಿಬ್ಬನ್, ರೆಡ್‍ಕ್ರಾಸ್ ಹಾಗೂ ಎನ್.ಎಸ್.ಎಸ್. ಘಟಕದ ವತಿಯಿಂದ ರಕ್ತದಾನದ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಡಾ. ಕರುಂಬಯ್ಯ, ವೈದ್ಯಾಧಿಕಾರಿ ರಕ್ತದಾನ ವಿಭಾಗ, ಜಿಲ್ಲಾ ಆಸ್ಪತ್ರೆ ಮಡಿಕೇರಿ ಇವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವ, ರಕ್ತದಾನ ಮಾಡಲು ಇರಬೇಕಾದ ಅರ್ಹತೆ, ರಕ್ತದಾನ ಮಾಡುವುದರ ಪ್ರಯೋಜಗಳ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಜವರಪ್ಪ ಡಿ.ಜೆ. ರಕ್ತದಾನ ಮಾಡುವಲ್ಲಿ ಯುವಜನಾಂಗ ಹೆಚ್ಚು ಪ್ರಯತ್ನವನ್ನು ಮಾಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರಕ್ತ ರಿಬ್ಬನ್ ಸಂಚಾಲಕಿ ನಿರ್ಮಲ ಹೆಚ್.ಪಿ., ರೆಡ್‍ಕ್ರಾಸ್ ಘಟಕದ ಸಂಚಾಲಕ ಮಹೇಶ್ ಕೆ.ಕೆ., ಬೋಧಕ, ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಲತಾ ಮತ್ತು ತಂಡದವರು ಭಾವಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸೀಮಾ ಸ್ವಾಗತಿಸಿದರು, ಪ್ರಮೀಳ ವಂದಿಸಿದರು. ಹರ್ಷಿತಾ ಎ. ನಿರೂಪಿಸಿದರು.