ಮಡಿಕೇರಿ, ಫೆ. 1: ಕುಟ್ಟದ ತೋಟವೊಂದರ ಮನೆಯ ಗೋದಾಮುವಿನಲ್ಲಿ ದಾಸ್ತಾನು ಇರಿಸಲಾಗಿದ್ದ 28 ಚೀಲ ಕರಿಮೆಣಸನ್ನು ಕಳ್ಳರು ಹೊತ್ತೊಯ್ದಿರುವ ಕೃತ್ಯವೊಂದು ಬೆಳಕಿಗೆ ಬಂದಿದೆ.ಅಲ್ಲಿನ ನಿವಾಸಿ ಬೊಜ್ಜಂಗಡ ಸೋಮಣ್ಣ ಎಂಬವರು ತಮ್ಮ ಗೋದಾಮುವಿನಲ್ಲಿ ಕಾಫಿ ಹಾಗೂ 30 ಸೀಲ ಕರಿಮೆಣಸು ದಾಸ್ತಾನು ಇರಿಸಿದ್ದಾಗಿ ತಿಳಿದುಬಂದಿದೆ.ಈ ಬಗ್ಗೆ ಸುಳಿವು ಪಡೆದಿರುವ ಯಾರೋ ಕಳ್ಳರು ಗೋದಾಮುವಿನ ಪಕ್ಕದ ಕೊಠಡಿ ಮೂಲಕ ಮೇಲ್ಛಾವಣಿ ಏರಿದ್ದಾರೆ. ಅಲ್ಲಿಂದ ಅಟ್ಟಣಿಗೆಯ ಹಲಗೆಗಳನ್ನು ಬೇರ್ಪಡಿಸಿ, ಒಳಗೆ ನುಗ್ಗಿದ್ದಾರೆ. ಬಳಿಕ ದಾಸ್ತಾನು ಇರಿಸಲಾಗಿದ್ದ ಒಟ್ಟು 30 ಚೀಲ ಕರಿಮೆಣಸು ಪೈಕಿ 28 ಚೀಲಗಳನ್ನು ದಾಸ್ತಾನು ಸಹಿತ ಹೊತ್ತೊಯ್ದಿರುವುದು ಬೆಳಕಿಗೆ ಬಂದಿದೆ.(ಮೊದಲ ಪುಟದಿಂದ) 15 ದಿನಗಳ ಹಿಂದೆ ತೋಟ ಮಾಲೀಕರು ಕೆಲಸದವರಿಂದ ಈ ಗೋದಾಮುವಿನಲ್ಲಿ ದಾಸ್ತಾನು ಇರಿಸಿ ಬೀಗ ಹಾಕಿಸಿದ್ದಾರೆ. ಇಂದು ಬೆಳಿಗ್ಗೆ ಗೋದಾಮುವಿನಲ್ಲಿ ನೋಡಲಾಗಿ ಕರಿಮೆಣಸು ಕಳ್ಳತನ ಪತ್ತೆಯಾಗಿದೆ. ಆ ಮೇರೆಗೆ ಕುಟ್ಟ ಠಾಣೆಗೆ ಪುಕಾರು ನೀಡಿದ್ದು, ತನಿಖೆ ಮುಂದುವರಿದಿದೆ.