ಮಡಿಕೇರಿ, ಜ. 31: ಜಿಲ್ಲೆಯಲ್ಲಿ 2019-20ನೇ ಸಾಲಿನ ಕನಿಷ್ಟ ಬೆಂಬಲ ಯೋಜನೆಯಡಿ ರೈತರಿಂದ ಭತ್ತವನ್ನು ಸರ್ಕಾರ ಖರೀದಿ ಮಾಡುವ ಸಲುವಾಗಿ ರೈತರ ನೋಂದಣಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅದರಂತೆ ಈವರೆಗೆ ದತ್ತಾಂಶದಲ್ಲಿ ನೋಂದಾವಣೆ ಯಶಸ್ವಿಯಾಗಿ ಪೂರ್ಣಗೊಂಡ ರೈತರು ಕೂಡಲೇ ಸಂಬಂಧಪಟ್ಟ ಖರೀದಿ ಕೇಂದ್ರಗಳಿಗೆ ತೆರಳಿ ಭತ್ತದ ಸ್ಯಾಂಪಲ್ (ಮಾದರಿ) ನೀಡಲು ಕೋರಿದೆ.

ರೈತರು ನೋಂದಾವಣೆ ಮಾಡುವ ಸಂದರ್ಭದಲ್ಲಿ ತೊಂದರೆ ಉಂಟಾದ ಪಕ್ಷದಲ್ಲಿ ಅಂದರೆ ಬೆಳೆ ವಿವರ ಬೆಳೆ ಸಮೀಕ್ಷೆಯಲ್ಲಿ ನಮೂದಾಗದೇ ಅಥವಾ ಸರ್ವೆ ನಂಬರ್‍ನ ವಿವರ ಈಡಿuiಣ ದತ್ತಾಂಶದಲ್ಲಿ ನಮೂದಾಗದೇ ಇದ್ದಲ್ಲಿ, ಮುಂತಾದ ತೊಂದರೆ ಉಂಟಾದಲ್ಲಿ ರೈತರು ತಮ್ಮ ಆರ್‍ಟಿಸಿ ಹಾಗೂ ಈಡಿuiಣ Iಆ ಯನ್ನು ತೆಗೆದುಕೊಂಡು ಕಡ್ಡಾಯವಾಗಿ ಆಯಾಯ ಖರೀದಿ ಕೇಂದ್ರಗಳಿಗೆ ತಕ್ಷಣ ತೆರಳಲು ತಿಳಿಸಿದೆ ಹಾಗೂ ಅಲ್ಲಿ ನೇರವಾಗಿ ಆಕ್ಷೇಪಣೆಯನ್ನು ಸಲ್ಲಿಸಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಗೌರವ್‍ಕುಮಾರ್ ಶೆಟ್ಟಿ ಕೋರಿದ್ದಾರೆ.