ಮಡಿಕೇರಿ, ಜ.25: ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಗೋಣಿಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಗೋಣಿಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾ. 26 ರಿಂದ 28 ರವರೆಗೂ ಶಾಲಾ ಸುವರ್ಣ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.

ತಾ. 26 ರಂದು ಬೆಳಗ್ಗೆ 8 ಗಂಟೆಗೆ ಹಿರಿಯರಾದ ಜಿ.ಸಿ.ಅಣ್ಣಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಜನವರಿ 26 ರಂದು ಬೆಳಗ್ಗೆ 11 ಗಂಟೆಗೆ ಸಮಾರಂಭದ ಉದ್ಘಾಟನೆ ನಡೆಯಲಿದೆ. ಕಟ್ಟಡ ನಿರ್ಮಾಣ ಮಂಡಳಿ ನಿರ್ದೇಶಕರಾದ ನಾಪಂಡ ಎಂ.ಮುತ್ತಪ್ಪ, ಗಣಗೂರು ಗ್ರಾ.ಪಂ. ಅಧ್ಯಕ್ಷರಾದ ಸವಿತ ಸುಕುಮಾರ್, ಜಿ.ಪಂ.ಸದಸ್ಯರಾದ ಎಚ್.ಆರ್. ಶ್ರೀನಿವಾಸ್, ಮಂಗಳೂರು ಎಸ್‍ಪಿಡಿಸಿಆರ್‍ಇ ಎಸ್.ಜೆ. ಕುಮಾರಸ್ವಾಮಿ, ಗೋಣಿಮರೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ವೀರಪ್ಪ ಮಡಿವಾಳ್, ಬಾಣಾವಾರ ನಿವೃತ್ತ ಶಿಕ್ಷಕರಾದ ವೀರಭದ್ರಪ್ಪ ಇತರರು ಪಾಲ್ಗೊಳ್ಳಲಿದ್ದಾರೆ. ಶಾಲಾ ಸುವರ್ಣ ಮಹೋತ್ಸವದ ಪ್ರಯುಕ್ತ ಹಳೆಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕ್ರೀಡಾಕೂಟ ನಡೆಯಲಿದೆ.

ತಾ. 27 ರಂದು ಸ್ಥಳೀಯರು ಮತ್ತು ಹಳೇ ವಿದ್ಯಾರ್ಥಿಗಳಿಗೆ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ. ಪುರುಷರಿಗಾಗಿ ಗುಡ್ಡಗಾಡು ಓಟ, ವೇಗದ ಸೈಕಲ್ ಸ್ಪರ್ಧೆ, ಮಡಿಕೆ ಒಡೆಯುವುದು, ನಿಧಾನಗತಿ ಬೈಕ್ ಚಾಲನೆ, ಭಾರದ ಗುಂಡು ಎಸೆತ, ಕಾಯಿಗೆ ಗುಂಡು ಹೊಡೆಯುವುದು, 50 ಕೆ.ಜಿ.ಮೂಟೆ ಎತ್ತಿಕೊಂಡು ಓಡುವ ಸ್ಪರ್ಧೆ, ಹಗ್ಗ ಜಗ್ಗಾಟ (ಸ್ಥಳೀಯರಿಗೆ), 100 ಮೀ. ಓಟ, 50 ವರ್ಷ ಮೇಲ್ಪಟ್ಟವರಿಗೆ 100 ಮೀ.ಓಟ.

ಮಹಿಳೆಯರಿಗಾಗಿ ಹಗ್ಗ ಜಗ್ಗಾಟ (ಸ್ಥಳೀಯರಿಗೆ) ರಂಗೋಲೆ ಸ್ಪರ್ಧೆ, ನಿಂಬೆ ಹಣ್ಣು ಓಟ, ನೀರು ನಡಿಗೆ ಸ್ಪರ್ಧೆ (ಇದಕ್ಕೆ ಬೇಕಾದ ಚೊಂಬುಗಳನ್ನು ಸ್ಪರ್ಧಿಗಳೇ ತರಬೇಕು), ಸಂಗೀತ ಕುರ್ಚಿ, ಮಡಿಕೆ ಒಡೆಯುವುದು, 100 ಮೀ.ಓಟ, 50 ವರ್ಷ ಮೇಲ್ಪಟ್ಟವರಿಗೆ 100 ಮೀ.ಓಟ, ಭಾರದ ಗುಂಡು ಎಸೆತ ಹಾಗೂ ಬಸ್ಸು ಹುಡುಕಾಟ. ನಂತರ ಸಂಜೆ 6 ಗಂಟೆಯಿಂದ ಹಳೇ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ತಾ. 28 ರಂದು ಮಧ್ಯಾಹ್ನ 3 ಗಂಟೆಗೆ ಶಾಲಾ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಶಾಸಕÀ ಅಪ್ಪಚ್ಚು ರಂಜನ್, ಎಸ್‍ಡಿಎಂಸಿ ಅಧ್ಯಕ್ಷ ಜಿ.ಬಿ.ಸಿದ್ಧಲಿಂಗಪ್ಪ, ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್, ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿಯ ನಿರ್ದೇಶಕರಾದ ನಾಪಂಡ ಎಂ.ಮುತ್ತಪ್ಪ ಇತರರು ಪಾಲ್ಗೊಳ್ಳಲಿದ್ದಾರೆ.

ಶಾಲಾ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಮುಕ್ತ ಪಂದ್ಯಾಟಗಳನ್ನು ಹಮ್ಮಿಕೊಳ್ಳಲಾಗಿದೆ. ಪಂದ್ಯಾಟಗಳಿಗೆ ನೊಂದಾವಣಿ ಮಾಡಿಕೊಳ್ಳಲು ತಾ. 26 ಕೊನೆ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು ಕ್ರೀಡಾ ಸಮಿತಿ: 9535189358 ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು: 9632579979 ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಕೋರಿದೆ.