ಮಡಿಕೇರಿ, ಜ.25: ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರದ ಅಧೀನದಲ್ಲಿ ಆಯೋಜನೆಗೊಂಡಿರುವ ಕೌಶಲ್ಯವೃದ್ಧಿ ಕಾರ್ಯಕ್ರಮದ ಮೊದಲನೇ ‘’ಹೌಸ್‍ಕೀಪಿಂಗ್’’ ತಂಡದ ಪದವಿ ಸಮಾರಂಭವು ತಾ. 27 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಮೈಸೂರು ರಸ್ತೆಯಲ್ಲಿರುವ ರೋಟರಿ ಹಾಲ್‍ನಲ್ಲಿ ನಡೆಯಲಿದೆ.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಎಚ್.ಪಿ.ಜನಾರ್ಧನ್, ಆರ್‍ಎಸ್‍ವಿಪಿ ಶಾಲಿನಿ ಚಾರ್ಲೆಸ್, ಪ್ರವಾಸೋದ್ಯಮ ಇಲಾಖೆಯ ಸಹಾಯ ನಿರ್ದೇಶಕ ರಾಘವೇಂದ್ರ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಚೇತನ್ ವಿ ಇತರರು ಪಾಲ್ಗೊಳ್ಳಲಿದ್ದಾರೆ.