ವೀರಾಜಪೇಟೆ, ಜ. 24: ಸರ್ಕಾರಿ ಶಾಲೆಗಳಲ್ಲಿ ನಾವುಗಳು ಓದಿದ್ದೇವೆ ಎಂದು ಕೀಳರಿಮೆ ಬೇಡ ಸರ್ಕಾರಿ ಶಾಲೆಗಳಲ್ಲಿ ಗೌರವಯುತ ಶಿಕ್ಷಣ ಪಡೆದು ಅಸಂಖ್ಯಾತ ವ್ಯಕ್ತಿಗಳು ಸಮಾಜದಲ್ಲಿ ಉನ್ನತೀಕರಣ ಸಾಧಿಸಿದ್ದಾರೆ ಎಂದು ಕಿತ್ತಳೆ ನಾಡು ಸಂಪಾದಕ ಮತ್ತು ಬೆಂಗಳೂರು ಅಯಿಶಾ ಅಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಕುವೈಂಡ ಹಂಜತುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವೀರಾಜಪೇಟೆ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಟೋಳಿ ಗುಂಡಿಕೆರೆಯಲ್ಲಿ ಅಯೋಜಿತವಾದ ಶಾಲಾ ವಿಜ್ಞಾನ ಮೇಳ ಮತ್ತು ಕ್ರೀಡೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜ್ಞಾನ ಮೇಳವನ್ನು ಉದ್ಘಾಟನೆ ಮಾಡಿ ಮಾತನಾಡಿದ ಹಂಜತುಲ್ಲಾ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳು ಒಂದು ವರದಾನವಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ವೀರಾಜಪೇಟೆ ಕ್ಷೇತ್ರ ಶಿಕ್ಷಣಧಿಕಾರಿ ಶ್ರೀಶೈಲ ಬೆಳಗಿ ಅವರು ಶಿಕ್ಷಣದ ಮೂಲ ಉದ್ದೇಶವೇ ಎಲ್ಲಾ ಸಮುದಾಯದೊಂದಿಗೆ ಬೆರೆತು ಶಿಕ್ಷಿತನಾಗು ಎಂಬುದಾಗಿದೆ. ದೀಪ ಹಚ್ಚವುದು ಜ್ಞಾನದ ಸಂಕೇತವಾಗಿದೆ ಅಜ್ಞಾನವನ್ನು ತೊಲಗಿಸುತ್ತದೆ, ದೀಪ ಹಚ್ಚುವುದು ಒಂದಡೆಯಾದರೆ ಅದರ ಬೆಳಕು ಮನದಲ್ಲಿ ಪ್ರಕಾಶಿಸಬೇಕು ಎಂದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಕೆದಮಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ. ಇಸ್ಮಾಯಿಲ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮ ಉದ್ದೇಶಿಸಿ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧೀಕಾರಿಗಳಾದ ವನಜಾಕ್ಷಿ, ಹೆಚ್.ಪಿ ಮದರಸ ಗುಂಡಿಕೆರೆ ಮುಖ್ಯ ಶಿಕ್ಷಕರು ರಶೀದ್ ಸಖಾಫಿ, ಗುಂಡಿಕೆರೆ ಜಮಾಯಾತ್ ಅಧ್ಯಕ್ಷರಾದ ಎಂ.ಎ ಅಬ್ಬಾಸ್ ಅವರುಗಳು ಮಾತನಾಡಿದರು.
ವೇದಿಕೆಯಲ್ಲಿ ಬಿ.ಬಿ. ಚೋಂದಮ್ಮ, ಅಧ್ಯಕ್ಷರು ಗ್ರಾಮ ಪಂಚಾಯಿತಿ ಬೇಟೋಳಿ, ಗ್ರಾಮ ಪಂಚಾಯಿತಿ ಸದಸ್ಯರಾದ ಉಮ್ಮರ್ ಫಾರೂಕ್, ಶ್ರೀಮತಿ ಶಿಲಾಮಣಿ, ಶ್ರೀಮತಿ ಲಾವಣ್ಯ, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸೋಮಯ್ಯ ಸಿ.ಎಂ, ಗ್ರಾಮ ಪಂಚಾಯಿತಿ ಪಿ.ಡಿ.ಓ. ಮಣಿ ಬಿ., ಕೆ.ಯು. ಮಹಮ್ಮದ್ ಹಾಜಿ ಮತ್ತು ಸ್ಥಳಾ ದಾನಿಗಳಾದ ಚೆಂಗಚಂಡ ಪಿ. ಪಾರ್ವತಿ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ವಿ.ಟಿ. ಉಪಸ್ಥಿತರಿದ್ದರು. ಬೇಟೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಮ್ಮಣಕುಟ್ಟಂಡ ವಸಂತ ಕಟ್ಟಿ, ಅವರು ಕ್ರೀಡಾ ಜ್ಯೋತಿಯನ್ನು ಉದ್ಘಾಟಿಸಿದರು. ಬಿ.ಬಿ. ಚೋಂದಮ್ಮ ಅವರು ಸಾರ್ವಜನಿಕರ ಮ್ಯಾರಥಾನ್ ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕವಾದ ಕವಾಯತು ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮ ಮತ್ತು ದೈಹಿಕ ವ್ಯಾಯಾಮಗಳು ಪ್ರದರ್ಶನಗೊಂಡವು. ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್.ಜಿ. ಸೀತಾ ಮತ್ತು ದೈಹಿಕ ಶಿಕ್ಷಕರಾದ ದಿನೇಶ್ ಅವರನ್ನು ಸನ್ಮಾನಿಸ ಲಾಯಿತು. ಶಾಲಾ ವಾರ್ಷಿಕ ವರದಿಯನ್ನು ಸಹಶಿಕ್ಷಕರಾದ ಸುಜಾತ ಅವರು ವಾಚಿಸಿದರು. ಸ್ವಾಗತ ಮತ್ತು ವಂದನಾರ್ಪಣೆಯನ್ನು ಶಾಲೆಯ ಮುಖ್ಯ ಶಿಕ್ಷಕಿಯಾದ ಹೆಚ್.ಜಿ, ಸೀತಾ ಅವರು ನಿರ್ವಹಿಸಿದರು.
ಸಮಾರಂಭದಲ್ಲಿ ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಣ ಇಲಾಖೆಯ ವಿವಿಧÀ ಕ್ಷೇತ್ರದ ಅಧಿಕಾರಿಗಳು ಗ್ರಾಮಸ್ಥರು ಮಹಿಳೆಯರು, ಮತ್ತು ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.