ಮಡಿಕೇರಿ, ಜ. 24: ಕೊಡಗಿನಲ್ಲಿ ಕಾಫಿ ಬೆಳೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದ್ದು ವರ್ಷವಿಡೀ ಕೃಷಿಕರು ತೋಟದ ನಿರ್ವಹಣೆಗಾಗಿ ಹಾಕಿದ ಬಂಡವಾಳ ಕೊನೆಯಲ್ಲಿ ಕಾಫಿ ಕೊಯ್ದು ಮಾರಾಟ ಮಾಡಿದಾಗ ಸಿಗದಂತಾಗಿದೆ.
ಕೊಡಗಿನ ಬಹುಪಾಲು ಕೃಷಿಕರಿಗೆ ಕಾಫಿಯೇ ಆದಾಯವಾಗಿದ್ದು ಕಾಫಿ ಬೆಳೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅದಕ್ಕಾಗಿ ಹಗಲಿರುಳು ದುಡಿಯುತ್ತಾರೆ. ಗೊಬ್ಬರ ಹಾಗೂ ತೋಟಕ್ಕೆ ನೀರಾವರಿ ಮಾಡಿ ಅದನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿರುತ್ತಾರೆ. ದುರಾದೃಷ್ಟ ಎಂದರೆ ಇನ್ನೇನು ಕಾಫಿ ಹೂ ಬಂದು ಕಾಫಿ ಬೀಜಗಳು ಕಾಣುವಂತಹ ಸಂದರ್ಭದಲ್ಲಿ ಅಕಾಲಿಕ ಮಳೆಯಿಂದಾಗಿ ಕಾಫಿ ಹೂಗಳು ಹಾಳಾಗಿ ಕಾಫಿ ಬೀಜಗಳು ನೆಲಕುರುಳುತ್ತವೆ. ಉಳಿದ ಕಾಫಿಯನ್ನಾದರು ಕೊಯ್ದು ಮಾರಾಟ ಮಾಡುವ ಅಂದರು, ಕಾಫಿ ತೋಟಗಳಿಗೆ ಕಾಡು ಹಂದಿಗಳು ನುಗ್ಗಿ ಇರುವ ಕಾಫಿ ಬೆಳೆಗಳನ್ನು ನಾಶ ಮಾಡಿ ಹೋಗುತ್ತದೆ.
ಇದರಿಂದಾಗಿ ಕಾಫಿ ಬೆಳೆದ ರೈತರಿಗೆ ಸೂಕ್ತ ಬೆಲೆಯು ಇಲ್ಲದೆ, ಕಾಫಿ ಬೆಳೆಯು ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಕಾಫಿಯು ಮೊದಮೊದಲು ಜನರ ಕಣ್ಣಿಗೆ ಬಂಗಾರದಂತೆ ಕಂಡರು, ಕೊನೆಯಲ್ಲಿ ಅದು ಕಬ್ಬಿಣದ ಹಾಗೆ ಕಂಡು ಅದು ಅವರನ್ನು ಕಷ್ಟಕ್ಕೆ ನೂಕುತ್ತದೆ. ಕಾಫಿಯನ್ನೇ ನಂಬಿ ಹಲವಾರು ಕನಸು ಕಂಡಿದ್ದ ರೈತ ಕಡಿಮೆ ಬೆಳೆಯಿಂದ ಅಥವಾ ಸೂಕ್ತ ಬೆಲೆ ಸಿಗದೆ ಕುಗ್ಗುತಿದ್ದಾನೆ.
ಆದಾಯಕ್ಕೆ ಕಾಫಿಯನ್ನೆ ನಂಬಿರುತ್ತಾರೆ ಕಾಫಿಯ ಆದಾಯ ಹೆಚ್ಚಾದರೆ ಅವರ ಕನಸುಗಳು ಹೆಚ್ಚಾಗುತ್ತದೆ ಅದು ಕಡಿಮೆ ಆದಷ್ಷು ಅವರ ಕನಸುಗಳು ಕುಗ್ಗುತ್ತವೆ ವರ್ಷದಿಂದ ವರ್ಷಕ್ಕೆ ಜೀವನ ಸಾಗಿಸಲು ರೈತನಿಗೆ ಈ ಬೆಲೆ ಅತಿ ತೀವ್ರ ಪರಿಣಾಮವಾಗಿ ನಿಲ್ಲುತ್ತದೆ. ಕಾಫಿ ಬಳಸುವವರು ಕಡಿಮೆಯಾಗುತ್ತಿದದ್ದು ಬೆಲೆಯು ಕಡಿಮೆ ಆಗುತ್ತ ಹೋಗುತ್ತಿದೆ ಬಿಸಿಲು ಮಳೆ ಎನ್ನದೆ ಕಷ್ಟಪಡುವ ರೈತನಿಗೆ ವರವಾಗಬೇಕಿದ್ದ ಕಾಫಿ ಕೆಲವು ವರ್ಷಗಳಿಂದ ಕೈಗೆಟಕುತ್ತಿಲ್ಲ.
ವರ್ಷದಿಂದ ವರ್ಷಕ್ಕೆ ಕಾಫಿ ಬೆಳೆಯು ಇಳಿಕೆಯಾಗುತ್ತಿದ್ದು 4000 ದವರೆಗು ಇದ್ದ ಕಾಫಿಯ ಬೆಲೆ ಇಂದು 2500, 3000 ಅನ್ನುವಂತಾಗಿದೆ. ಕೊಡಗಿನ ಜನರ ಪರಿಸ್ಥಿತಿ ಹೇಗಿದೆ ಎಂದರೆ ಕಾಫಿ ಅತಿ ಹೆಚ್ಚು ಇದ್ದ ವರ್ಷ ಬೆಲೆ ತೀವ್ರವಾಗಿ ಇಳಿಕೆಯಾಗುತ್ತ ಹೋಗುತ್ತದೆ ಅದೇ ಅತಿ ಮಳೆ ಹಾನಿಯಿಂದಾಗಿ ಕಾಫಿ ಕಮ್ಮಿ ಇದ್ದ ವರ್ಷ ಕಾಫಿ ಬೆಲೆ ಹೆಚ್ಚು ಅನ್ನುವಂತಿದೆ. ಕಾಫಿಯು ಕೊಡಗಿನ ಜನರನ್ನು ಹೇಗೆ ಶ್ರೀಮಂತನಾಗಿ ಮಾಡುತ್ತದೋ ಅಷ್ಟೇ ಬೇಗ ಅವರನ್ನು ಬಡವನಾಗಿಯು ಮಾಡುತ್ತದೆ ಇದೇ ಕಾರಣಕ್ಕೆ ಜನರು ಕಾಫಿಯನ್ನೇ ನಂಬದೇ ಹೊರಗೆ ಹೋಗಿ ಕೆಲಸವನ್ನು ಅವಲಂಬಿಸಿ ಬದುಕು ಕಟ್ಟಿಕೊಳ್ಳುತಿದ್ದಾರೆ.
ಸರ್ಕಾರದಿಂದ ಕಾಫಿ ಬೆಳೆಗಾರರಿಗೆ ಕೆರೆ ನಿರ್ಮಾಣ ಹಾಗೂ ಸ್ಪಿಂಕ್ಲರ್ ಶೇ. 40 ರಷ್ಟು ಯೂನಿಟ್ ಘಟಕ ವೆಚ್ಚದಲ್ಲಿ 25 ಎಕರೆವರೆಗೆ ಸಹಾಯಧನ ಸೌಲಭ್ಯ ಕಲ್ಪಿಸಲಾಗುತ್ತದೆ. ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಶಿಷ್ಯ ವೇತನ ಇತರ ಸೌಲಭ್ಯಗಳನ್ನು ಕಾಲ ಕಾಲಕ್ಕೆ ನೀಡಲಾಗುತ್ತದೆ ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕ ಶಿವಕುಮಾರಸ್ವಾಮಿ ತಿಳಿಸಿದ್ದಾರೆ.