ಮಡಿಕೇರಿ, ಜ. 24: ಪ್ರಸಕ್ತ ಸಾಲಿನಿಂದ ಕರ್ನಾಟಕ ಸರ್ಕಾರದ ಇ- ಆಡಳಿತ ಇಲಾಖೆಯವರು ಅಭಿವೃದ್ಧಿಪಡಿಸಿರುವ ಮೆಟ್ರಿಕ್ ನಂತರದ ರಾಜ್ಯ ವಿದ್ಯಾರ್ಥಿ ವೇತನವನ್ನು ಪೋರ್ಟಲ್‍ನ ಮೂಲಕ ಅನುಷ್ಠಾನಗೊಳಿಸುತ್ತಿದ್ದು, ಪರಿಶಿಷ್ಟ ವರ್ಗದ ಅರ್ಹ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿತ್ತು. ಇದೀಗ ತಾ. 31 ರವರೆಗೆ ವಿಸ್ತರಿಸಿ ಮತ್ತೊಮ್ಮೆ ಅವಕಾಶವನ್ನು ನೀಡಿದೆ. ಸದರಿ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

ಕಳೆದ ವರ್ಷ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳು ಸಹ ಪ್ರಸ್ತುತ ಸಾಲಿನಲ್ಲಿ ಎಸ್.ಎಸ್.ಪಿ. ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಯಾವ ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸದೇ ಕಾಲೇಜಿಗೆ ಸೇರಿರುತ್ತಾರೋ ಅಂತಹ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ವರ್ಗದ ವಿದ್ಯಾರ್ಥಿನಿಲಯಗಲ್ಲಿ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಕಾಲೇಜುಗಳಿಂದ ನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಾತಿ ಪತ್ರಗಳನ್ನು ಕಾಲೇಜಿನ ಪ್ರಾಂಶುಪಾಲರು ನೀಡಬೇಕು ಸದರಿ ವಿದ್ಯಾರ್ಥಿಗಳು ಸಹ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.