ನಾಪೋಕ್ಲು, ಜ. 24: ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದ ಈಶಾನ್ಯ ಭಾಗದ ಪೌಳಿ ಕಾಮಗಾರಿಗೆ ಭಕ್ತ ಜನಸಂಘದ ಆಡಳಿತ ಮಂಡಳಿ ಹಾಗೂ ಸಮಿತಿಯ ಸದಸ್ಯರು ಭೂಮಿ ಪೂಜೆ ನೆರವೇರಿಸಿದರು. ಭಕ್ತಜನ ಸಂಘದ ಅಧ್ಯಕ್ಷ ಪಾಂಡಂಡ ಬಿ.ಜೋಯಪ್ಪ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಪ್ರಧಾನ ಅರ್ಚಕ ಕುಶಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಉಪಾಧ್ಯಕ್ಷ ಪರದಂಡ ಡಾಲಿ, ಕಾರ್ಯದರ್ಶಿ ಬೊಳ್ಯಪಂಡ ಲಲಿತ ನಂದಕುಮಾರ್ ಖಜಾಂಚಿ ನಂಬಡಮಾಡ ಸುಬ್ರಮಣಿ, ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ನಿರ್ದೇಶಕರಾದ ಕಲಿಯಂಡ ಹ್ಯಾರಿಮಂದಣ್ಣ ಕೋಡಿಮಣಿಯಂಡ ಸುರೇಶ್, ಪಾಂಡಂಡ ನರೇಶ್, ಡಾ. ಸಣ್ಣುವಂಡ ಕಾವೇರಪ್ಪ, ನಿವೃತ್ತ ಕಾರ್ಯಪಾಲಕ ಅಭಿಯಂತರ ಕೋಡಿಮಣಿಯಂಡ ವಿಶ್ವನಾಥ್, ಕಾರ್ಯನಿರ್ವಾಹಕ ಕಂಬೇಯಂಡ ಬೊಳ್ಯಪ್ಪ, ಪಾರುಪತ್ತೆಗಾರ ಪರದಂಡ ಪ್ರಿನ್ಸ್‍ತಮ್ಮಯ್ಯ, ಹಾಗೂ ಭಕ್ತರು ಪಾಲ್ಗೊಂಡಿದ್ದರು.