ಮಡಿಕೇರಿ, ಜ. 24: ಸದ್ಗುರು ಸಾಯಿ ಶಂಕರ ಭಕ್ತಾದಿಗಳಿಂದ ತಾ.25ರಂದು (ಇಂದು) ಪೊನ್ನಂಪೇಟೆಯ ಪ್ರಶಾಂತಿ ನಿಲಯದಲ್ಲಿ ಸದ್ಗುರು ಸಾಯಿ ಶಂಕರರ 85ನೇ ಜನ್ಮ ದಿನಾಚರಣೆ ನಡೆಯಲಿದೆ. ಈ ಪ್ರಯುಕ್ತ ಬೆಳಿಗ್ಗೆಯಿಂದ ಭಜನೆ, 9.30ರಿಂದ ಗಣಪತಿಹೋಮ, ರುದ್ರಾಭಿಷೇಕ, ಅಪರಾಹ್ನ 1 ಗಂಟೆಗೆ ಮಹಾ ಮಂಗಳಾರತಿ ಜರುಗಲಿದೆ.