ಮಡಿಕೇರಿ, ಜ. 24: ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ 2020ನೇ ಸಾಲಿನ ಅಧ್ಯಕ್ಷರಾಗಿ ಘಟಕದ ಸ್ಥಾಪಕ ಸದಸ್ಯ ಹೆಚ್.ಆರ್. ಮಧು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತಾ. 25ರಂದು (ಇಂದು) ಗೋಣಿಕೊಪ್ಪ ಸಮೀಪದ ಬರಂಡಿ ಹಾಲ್‍ನಲ್ಲಿ ನಡೆಯುವ ಸಮಾರಂಭದಲ್ಲಿ ಅಧ್ಯಕ್ಷೆ ಶೀಲ ಬೋಪಣ್ಣ ಇವರಿಂದ ಅಧಿಕಾರ ಸ್ವೀಕರಿಸಲಿದ್ದಾರೆ. ವಲಯ ಹದಿನಾಲ್ಕರ ಪೂರ್ವ ಅಧ್ಯಕ್ಷ ದೇವಿಪ್ರಸಾದ್ ಪ್ರಸ್ತುತ ವಲಯ ಅಧ್ಯಕ್ಷ ಸಮತ, ವಲಯ ಉಪಾಧ್ಯಕ್ಷ ಪುನಿತ್ ಭಾಗವಹಿಸಲಿದ್ದಾರೆ. ಈ ಸಂದರ್ಭ ಜೆಸಿ ಪೊನ್ನಂಪೇಟೆ ನಿಸರ್ಗ ಘಟಕದ ಆಡಳಿತ ಮಂಡಳಿಯ ಅಧಿಕಾರ ಸ್ವೀಕಾರ ನಡೆಯಲಿದೆ.