ನಾಪೆÇೀಕ್ಲು, ಜ. 24 : ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ಚೆಯ್ಯಂಡಾಣೆ ಚೇಲವಾರ ಗ್ರಾಮಕ್ಕಾಗಿ ಹೊಸೋಕ್ಲು ಕುಟುಂಬದವರ ಮನೆಗಾಗಿ ಹೋಗುವ ರಸ್ತೆ ಬದಿಯಲ್ಲಿ ಅಪರಿಚಿತ ವೃದ್ಧರೋರ್ವರ ಮೃತದೇಹ ಪತ್ತೆಯಾಗಿದೆ. ತಿಳಿ ನೀಲಿ ಬಣ್ಣದ ಶರ್ಟ್, ಕೆಂಪು ಬಣ್ಣದ ಲುಂಗಿ ಧರಿಸಿರುವ ವ್ಯಕ್ತಿಯ ಶವದ ಬಗ್ಗೆ ವಿಷಯ ತಿಳಿದ ನಾಪೆÇೀಕ್ಲು ಪೊಲೀಸ್ ಠಾಣಾಧಿಕಾರಿ ಆರ್.ಮಂಚಯ್ಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಶವವನ್ನು ಸ್ಥಳ ಮಹಜರು ನಡೆಸಿ ನಂತರ ಆಸ್ವತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ವಾರಸುದಾರರು ಇದ್ದಲ್ಲಿ ನಾಪೆÇೀಕ್ಲು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಠಾಣಾಧಿಕಾರಿ ಕೋರಿದ್ದಾರೆ.