ಮಡಿಕೇರಿ, ಜ.23: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ತಾ. 24 ರಂದು (ಇಂದು) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಗಲ್ರ್ಸ್ ಗೋಡೆ (Wಚಿಟಟ oಜಿ ಉiಡಿಟs) ನಿರ್ಮಿಸಿದ್ದು, “ಹೆಣ್ಣು ಮಕ್ಕಳ ಉತ್ತಮ ನಾಳೆಗಾಗಿ ಅತ್ಯುತ್ತಮ ಆಲೋಚನೆಗಳನ್ನು” ಗೋಡೆ ಮೇಲೆ ದಾಖಲಿಸಲು ಕೋರಲಾಗಿದ್ದು, 2 ರಿಂದ 3 ಸಾಲುಗಳಿಗೆ ಸೀಮಿತವಾಗಿದೆ. ಅತ್ಯುತ್ತಮ ಆಲೋಚನೆಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ ಅವರು ತಿಳಿಸಿದ್ದಾರೆ.