ಮಡಿಕೇರಿ, ಜ. 23: ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಘಟಕ ಇವರ ವತಿಯಿಂದ ಸಾಹಿತಿ ಐಮಂಡ ಜಗದೀಶ್‍ರವರ ಕತ್ತಲೆಯ ಕಿರಣ ಪುಸ್ತಕದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯು ತಾ. 24 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಬಿ.ಎಸ್ .ಲೋಕೇಶ್‍ಸಾಗರ್, ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅಧ್ಯಕ್ಷತೆ ವಹಿಸುವರು.

ಅತಿಥಿಗಳಾಗಿ ಸಾಹಿತಿ ಕಿಗ್ಗಾಲು ಗಿರೀಶ್, ಪತ್ರಕರ್ತ ಅಲ್ಲಾರಂಡ ವಿಠಲ್ ನಂಜಪ್ಪ, ನಾಪ್ಲೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಕನ್ನಡ ಭಾಷಾ ಶಿಕ್ಷಕಿ ಉಷಾರಾಣಿ, ಲೇಖಕ ಐಮಂಡ ಜಗದೀಶ್, ಕಸಾಪ ಗೌರವ ಕಾರ್ಯದರ್ಶಿ ಡಾ. ದಯಾನಂದ್, ಗೌರವ ಕೋಶಾಧ್ಯಕ್ಷರು ಬಾಳೆಕಜೆ ಯೋಗೇಂದ್ರ, ಗೌರವ ಕಾರ್ಯದರ್ಶಿ ಬಾಳೆಯಂಡ ಕಿಶನ್ ಪೂವಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.