ಮಡಿಕೇರಿ, ಜ. 20: ಇಂದು ಜಿಲ್ಲಾ ಸವಿತಾ ಸಮಾಜದ ಸಭೆ ವೈ. ಪುಟ್ಟರಾಜು ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯಕಾರಿ ಸದಸ್ಯರಾದ ನಾಗರಾಜ್, ವೀರಾಜಪೇಟೆ ತಾಲೂಕು ಅಧ್ಯಕ್ಷ ವೆಂಕಟೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಎಂ.ಟಿ. ಮಧು, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಶಿವಣ್ಣ ಭಾಗವಹಿಸಿದ್ದರು.
ವೆಂಕಟೇಶ್ ಅವರ ನಿಧನದಿಂದ ತೆರವಾಗಿದ್ದ ಸವಿತಾ ಸಮಾಜ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಕೆ.ಎಸ್. ದೊರೇಶ್ ಚುನಾವಣೆಯ ಮೂಲಕ ಆಯ್ಕೆಯಾದರು. ಪ್ರತಿಸ್ಪರ್ಧಿಯಾಗಿದ್ದ ಲೋಕೇಶ್ ಅಲ್ಪ ಮತಗಳಿಂದ ಸೋಲನುಭವಿಸಿದರು.
ನೂತನವಾಗಿ ಆಯ್ಕೆ ಆದ ದೊರೇಶ್ ಅವರಿಗೆ ನಾಗರಾಜ್ ಪ್ರಮಾಣಪತ್ರ ನೀಡಿದರು. ಮೂರು ತಾಲೂಕು ಅಧ್ಯಕ್ಷರುಗಳಿಗೂ ಪ್ರಮಾಣ ಪತ್ರವನ್ನು ನೀಡಲಾಯಿತು. ಅವಿನಾಶ್ ಬೊಟ್ಲಪ್ಪ ಸ್ವಾಗತಿಸಿ, ನಿರೂಪಿಸಿದರು. ಚರಣ್ ವಂದಿಸಿದರು.