ನಾಪೆÇೀಕ್ಲು, ಜ. 20: ದೇಶದೆಲ್ಲೆಡೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಸ್ವಚ್ಛ ಭಾರತ ನಿರ್ಮಾಣಕ್ಕೆ ಟೊಂಕ ಕಟ್ಟಿ ಶ್ರಮಿಸುತ್ತಿದ್ದಾರೆ. ಸರಕಾರ, ಶಿಕ್ಷಣ ಇಲಾಖೆ ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದರೆ ಎಲ್ಲಾ ಬಣ್ಣ ಮಸಿ ನುಂಗಿತು ಎಂಬಂತೆ ನಾಪೆÇೀಕ್ಲುವಿನ ಕೆಲವು ಪುಂಡ ಪೆÇೀಕರಿಗಳು ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನಲ್ಲಿ ಮದ್ಯದ ಖಾಲಿ ಶೀಸೆಗಳನ್ನು ತಂದು ಸುರಿಯುವದರ ಮೂಲಕ ಸ್ವಚ್ಛ ಭಾರತಕ್ಕೆ ವಿರೋಧ ವ್ಯಕ್ತಪಡಿಸುವದರೊಂದಿಗೆ ತಮ್ಮ ಪೈಶಾಚಿಕ ಮನಸ್ಥಿತಿ ತೋರಿಸಿದ್ದಾರೆ. ಪೆÇಲೀಸ್ ಇಲಾಖೆ ಈ ವ್ಯಾಪ್ತಿಯಲ್ಲಿ ರಾತ್ರಿ ಸಂಚರಿಸಿದ ವಾಹನಗಳನ್ನು ಸಿಸಿ ಕ್ಯಾಮರದ ಮೂಲಕ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕೇಲೇಟಿರ ದೀಪು ದೇವಯ್ಯ ಮತ್ತಿತರರು ಆಗ್ರಹಿಸಿದ್ದಾರೆ. -ಪಿ.ವಿ.ಪ್ರಭಾಕರ್