ವೀರಾಜಪೇಟೆ, ಜ. 20: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ನಲ್ಲಿ ನೀರಿನ ಶುಲ್ಕ ವಸೂಲಿಗೆ ರೂ 28ಲಕ್ಷಕ್ಕೂ ಅಧಿಕ ಬಾಕಿ ಇದೆ. ಪಟ್ಟಣದ ನಲ್ಲಿ ನೀರಿನ ಬಳಕೆದಾರರು ಮುಂದಿನ 10ದಿನಗಳೊಳಗೆ ಬಾಕಿ ಉಳಿಸಿಕೊಂಡಿರುವ ನೀರಿನ ಶುಲ್ಕ ಪಾವತಿಸದಿದ್ದರೆ ಮುನ್ಸೂಚನೆ ನೀಡದೆ ನಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಮುಖ್ಯಾಧಿಕಾರಿ ಎಂ.ಎ.ಶ್ರೀಧರ್ ತಿಳಿಸಿದ್ದಾರೆ.

ಮನೆ ಕಂದಾಯ ರೂ. 20 ಲಕ್ಷ ಬಾಕಿ ಉಳಿಸಿಕೊಂಡಿದ್ದು ಈ ಬಾಕಿದಾರರಿಗೂ ನೀರಿನ ಸಂಪರ್ಕ ಕಡಿತಗೊಳಿಸಿ ವಸೂಲಾತಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅನೇಕ ವರ್ತಕರು ಪರವಾನಗಿಯನ್ನು ನವೀಕರಿಸದಿರುವುದು, ಪರವಾನಗಿ ರಹಿತವಾಗಿ ವ್ಯವಹಾರ ನಡೆಸುತ್ತಿರು ವವರ ವಿರುದ್ಧವು ತೆರಿಗೆ ವಸೂಲಿಗೆ ಕಠಿಣ ಕ್ರಮ ವಹಿಸಲಾಗುವುದು ಎಂದು ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೂ 16.36 ಲಕ್ಷ ಆದಾಯ

ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ 14 ಮಳಿಗೆಗಳ ಹರಾಜಿನಿಂದ ಪಟ್ಟಣ ಪಂಚಾಯಿತಿಗೆ ವಾರ್ಷಿಕವಾಗಿ ರೂ. 16,36,200 ಆದಾಯ ಬಂದಿದೆ.

ಕಳೆದ 12ತಿಂಗಳ ಹಿಂದೆ ಈ ಮಳಿಗೆಗಳ ಹರಾಜಾಗಿದ್ದು ಕೆಲವರು ಬಿಡ್‍ನ ಪಾವತಿ ಮಾಡದಿರುವು ದರಿಂದ ಇನ್ನು ಕೆಲವರು ಮಳಿಗೆಗಳನ್ನು ಪಂಚಾಯಿತಿಗೆ ಹಿಂತಿರುಗಿಸಿದ್ದರಿಂದ ಮಳಿಗೆಗಳನ್ನು ಮರು ಹರಾಜು ಮಾಡಿದಾಗ ಈ ಮೊತ್ತ ಲಭಿಸಿದೆ.

ಮಳಿಗೆಗಳ ಮರು ಹರಾಜು ಸಂದರ್ಭ ಆಡಳಿತಾಧಿಕಾರಿ ಮಹೇಶ್, ಮುಖ್ಯಾಧಿಕಾರಿ ಎಂ.ಎ. ಶ್ರೀಧರ್, ಸಹಾಯಕ ಅಭಿಯಂತರ ಎನ್.ಪಿ. ಹೇಮ್‍ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.