ಮಡಿಕೇರಿ, ಜ. 20: ಒಂದೆಡೆ ಬೇಸಿಗೆ ಕಾಲ ಹತ್ತಿರ,ಸಮೀಪಿಸುತ್ತಿದೆ, ಇನ್ನೇನು ಪ್ರತಿವರ್ಷದಂತೆ ಈ ವರ್ಷವೂ ಮಾಮೂಲಿ ಬೇಸಿಗೆ ಕಾಲದಲ್ಲಿ ನೀರಿಗೆ ಹಾಹಕಾರ ಇದ್ದದ್ದೆ. ನಗರದಲ್ಲಿ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಇರುವುದು ಒಂದೆಡೆಯಾದರೆ. ಇದೀಗ ಮಡಿಕೇರಿಯ ಹೊಸ ಬಡವಾಣೆಯ ನಿವಾಸಿಗಳಿಗೆ ಮಲಿ&divound;ಗೊಂಡ ಕುಡಿಯುವ ನೀರು ಸರಬರಾಜು ಆಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ.

ಕಳೆದ ಎರಡು-ಮೂರು ದಿನಗಳಿಂದ ಮಡಿಕೇರಿಯ ಹೊಸ ಬಡವಾಣೆಯ ನಿವಾಸಿಗಳು ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಹೊಸ ಬಡವಾಣೆಯಲ್ಲಿನ ನಿವಾಸಿಗಳಿಗೆ ಕಳೆದ ಕೆಲವು ದಿನಗಳ ಹಿಂದೆ, ಕಸಕಡ್ಡಿ ಮಿಶ್ರಿತ ನೀರನ್ನು ನಗರಸಭೆ ಸರಬರಾಜು ಮಾಡಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ನಂತರ ನಗರಸಭೆ ಎಚ್ಚೆತ್ತುಕೊಂಡು ಕಳೆದ ಎರಡು-ಮೂರು ದಿನಗಳಿಂದ ನಮಗೆ ಮಲಿನ ನೀರು ನಗರಸಭೆಯಿಂದ ಪೂರೈಕೆ ಆಗುತ್ತಿದೆ. ಇದೀಗ ಕುಡಿಯವ ನೀರಿಗೆ ತೊಂದರೆ ಉಂಟಾಗಿದೆ. ಇದರ ಬಗ್ಗೆ ನಗರ ಸಭೆ ಎಚ್ಚೆತ್ತುಕೊಂಡು ಹೊಸ ಬಡವಾಣೆಯ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು.

- ಸುಮಿತ್ರ, ಹೊಸ ಬಡಾವಣೆಯ ನಿವಾಸಿ.

ಕಳೆದ 2-3 ದಿನಗಳಿಂದ ನಗರದ ಹೊಸ ಬಡಾವಣೆಯ ನಿವಾಸಿಗಳಿಗೆ ಕಲುಷಿತ ನೀರು ಸರಬರಾಜು ಆಗುತ್ತಿದ್ದು, ಈ ಸಂಬಂಧ ನಗರಸಭೆಯ ಅಭಿಯಂತಕರ ಗಮನಕ್ಕೆ ತರಲಾಗಿದ್ದು, ಈಗಾಗಲೇ ಕಿರಿಯ ಅಭಿಯಂತಕರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಹೊಸ ಪೈಪ್ ಲೈನ್ ಅಳವಡಿಸಲಾಗುದೆಂದು ಭರವಸೆ ನೀಡಿದ್ದಾರೆ.

- ರವಿಗೌಡ ಅಧ್ಯಕ್ಷರು, ಮಡಿಕೇರಿ ನಗರ ಹಿತರಕ್ಷಣಾ ವೇದಿಕೆ

ಈ ಹಿಂದೆ ಕೂಡ ಚರಂಡಿ ಸ್ಲ್ಯಾಬಿನ ಒಳಗ್ಗಿನಿಂದ ಹಾದು ಹೋಗಿರುವ ನೀರು ಸರಬರಾಜು ಪೈಪ್‍ಲೈನ್ ಒಡೆದು ಕಲುಷಿತ ನೀರು ಸರಬರಾಜು ಆಗಿತ್ತು. ಈ ಸಂಬಂಧ ಪರಿಶೀಲನೆ ಮಾಡಿ ಒಡೆದ ಪೈಪ್‍ನ್ನು ಪತ್ತೆ ಹಚ್ಚಿ ಪೈಪ್‍ಗಳ ದುರಸ್ತಿ ಮಾಡಲಾಯಿತು. ಆದರೆ ಇದೀಗ ಆದೇ ರೀತಿಯ ಸಮಸ್ಯೆ ಮತ್ತೆ ಎದುರಾಗಿದ್ದು, ಕಲುಷಿತ ನೀರು ಕೆಲ ಮನೆಗಳಿಗೆ ಸರಬರಾಜು ಆಗುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಿದ್ದು, ಈಗಾಗಲೇ ನಗರಸಭೆ ಸಿಬ್ಬಂದಿಗಳನ್ನು ದುರಸ್ತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದು, ಹೊಸ ಪೈಪ್‍ಲೈನ್ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ.

- ನಾಗರಾಜ್, ಕಿರಿಯ ಅಭಿಯಂತರರು, ನಗರಸಭೆ ಮಡಿಕೇರಿಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಿತು. ಆದರೆ ಇದೀಗ ಇಲ್ಲಿನ ನಿವಾಸಿಗಳಿಗೆ ಮತ್ತೆ ನಲ್ಲಿಗಳ ಮೂಲಕ ಕಲುಷಿತ ನೀರು ಬರುತ್ತಿದೆ. ಆದಷ್ಟು ಬೇಗ ನಗರಸಭೆಯಿಂದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಬೇಕೆಂದು ಜನ ಒತ್ತಾಯಿಸಿದ್ದಾರೆ.

- ಕೆ.ಎ. ಇಸ್ಮಾಯಿಲ್ ಕಂಡಕೆರೆ