ಮಡಿಕೇರಿ, ಜ. 20: ಭಾಗಮಂಡಲದಲ್ಲಿ ಮಳೆಗಾಲದ ಪ್ರವಾಹದಿಂದ ರಕ್ಷಣೆಗಾಗಿ; ನಿರ್ಮಾಣಗೊಳ್ಳುತ್ತಿರುವ ಮೇಲ್ಸೇತುವೆ ಕಾಮಗಾರಿಯ ಕುರಿತು ಕಾವೇರಿ ನೀರಾವರಿ ನಿಗಮ ಹಾಗೂ ಇತರ ಅಧಿಕಾರಿಗಳ ತಂಡ ಇಂದು ಖುದ್ದು ಪರಿಶೀಲನೆ ನಡೆಸಿತು. ಸಂಬಂಧಿಸಿದ ಸೇತುವೆಗೆ ಆಕ್ಷೇಪಿಸಿ ಎಸ್.ಈ. ಜಯಂತ್ ಹಾಗೂ ಎನ್.ಪಿ. ರವೀಂದ್ರ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.ಆ ದಿಸೆಯಲ್ಲಿ ಉಚ್ಚ ನ್ಯಾಯಾಲಯವು ಕಾವೇರಿ ನದಿ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ನೋಟೀಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ. ಜಯಪ್ರಕಾಶ್ ನೇತೃತ್ವದ ತಂಡ ಮೇಲ್ಸೇತುವೆ ಕಾಮಗಾರಿಯ ಬಗ್ಗೆ ಖುದ್ದು ಮಾಹಿತಿ ಪಡೆದು ಕೊಂಡಿದ್ದಲ್ಲದೆ; ಕಾವೇರಿ ನದಿಗೆ ಇತರ ಯಾವದೇ ತ್ಯಾಜ್ಯ, ಕೊಳಕು ನೀರು ಹರಿಯುವಿಕೆ ಸಾಧ್ಯತೆ ಕುರಿತು ಪರಿಶೀಲನೆ ನಡೆಸಿತು. ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರ ಬಳಿ ಹಾಗೂ ತಣ್ಣಿಮಾನಿ, ಚೇರಂಗಾಲ ಗಳಲ್ಲಿ ನದಿ ಪಾತ್ರಗಳಿಗೆ ಭೇಟಿಯಿತ್ತು; ಕಾವೇರಿಯ ಹರಿವು ಸಂಬಂಧ ವೀಕ್ಷಣೆ ಮಾಡಲಾಯಿತು.
ಅಲ್ಲದೆ ಸ್ಥಳೀಯ ಆಡಳಿತ ಹಾಗೂ ಗ್ರಾ.ಪಂ.ನಿಂದ ನದಿ ನೀರು ಕಲುಷಿತಗೊಳ್ಳದಂತೆ ಅನುಸರಿಸ¨ Éೀಕಾದ ಕ್ರಮಗಳ ಕುರಿತು ಉನ್ನತ ಅಧಿಕಾರಿಗಳು ಸಂಬಂಧಿಸಿ ದವರಿಗೆ ಸೂಚನೆ ನೀಡಿದರು. ಪ್ರತಿ ಎರಡು ವರ್ಷಕ್ಕೊಮ್ಮೆ ನದಿಪಾತ್ರಗಳಲ್ಲಿ ನೀರಿನ ಹರಿಯುವಿಕೆ ಬಗ್ಗೆ ಖಾತರಿಪಡಿಸಿ ಕೊಂಡು; ಕಾಡು - ಗಿಡಗಂಟಿಗಳನ್ನು ತೆರವುಗೊಳಿಸಿ; ಮರಳು ಮತ್ತು ಹೂಳು ತುಂಬಿಕೊಳ್ಳದಂತೆ ನಿಗಾ ವಹಿ¸ Àಬೇಕೆಂದು ಕೆಳಹಂತದ ಅಧಿಕಾರಿಗಳಿಗೆ ತಿಳಿಹೇಳಿದರು.
ಮಾತ್ರವಲ್ಲದೆ ಮೇಲ್ಸೇತುವೆಯ ಅವಶ್ಯಕತೆ ಹಾಗೂ ಕಾವೇರಿ ನದಿ ಪಾವಿತ್ರ್ಯ (ಮೊದಲ ಪುಟದಿಂದ) ಕಾಪಾಡಲು ಅನುಸರಿಸುತ್ತಿರುವ ಕ್ರಮಗಳ ವಿಸ್ತøತ ವರದಿಯೊಂದಿಗೆ; ಉಚ್ಚ ನ್ಯಾಯಾಲ ಯಕ್ಕೆ ಪ್ರಮಾಣ ಪತ್ರ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದರು. ನಿಯೋಗದ ಭೇಟಿ ಸಂದರ್ಭ ಜಲಾನಯನ ಇಲಾಖೆ, ಪಂಚಾಯತ್ ರಾಜ್, ಭೂಮಾಪನ, ಕಂದಾಯ, ಪರಿಸರ, ಅರಣ್ಯ ಇಲಾಖೆಯ ಪ್ರಮುಖರೊಂದಿಗೆ ತಾ.ಪಂ. ಹಾಗೂ ಗ್ರಾ.ಪಂ. ಅಧಿಕಾರಿಗಳು, ಸ್ಥಳೀಯರು ಹಾಜರಿದ್ದು; ಮಾಹಿತಿ ನೀಡಿದರು.