ಕುಶಾಲನಗರ, ಜ. 19: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೊಸಪಟ್ಟಣ ಕಾರ್ಯಕ್ಷೇತ್ರದಲ್ಲಿ ನಾಗಿಣಿ ಸಂಘದ ಸದಸ್ಯರೊಬ್ಬರ ಕುಟುಂಬದ ಪ್ರತಿನಿಧಿಗೆ ಮಾಸಾಶನ ವಿತರಿಸಲಾಯಿತು.

ಯೋಜನೆಯ ಸದಸ್ಯೆ ಪಾರ್ವತಿ ಅವರ ಪತಿ ಕಾಳ ಎಂಬವರು ಅನಾರೋಗ್ಯ ಪೀಡಿತರಾಗಿ ದುಡಿಯಲು ಅಶಕ್ತರಾಗಿರುವ ಹಿನೆÀ್ನಲೆಯಲ್ಲಿ ಅವರಿಗೆ ಮಾಸಾಶನವಾಗಿ ರೂ. 750 ರೂಪಾಯಿಗಳ ಮೊದಲ ಕಂತಿನ ಮೊತ್ತವನ್ನು ಯೋಜನಾಧಿಕಾರಿ ವೈ.ಪ್ರಕಾಶ್ ಹಸ್ತಾಂತರ ಮಾಡಿದರು.

ಈ ಸಂದರ್ಭ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ಅಯ್ಯಂಡ್ರ ಎಂ. ಲೋಕನಾಥ್, ಕುಶಾಲನಗರ ವಲಯ ಮೇಲ್ವಿಚಾರಕ ಕೆ.ಹರೀಶ್, ಸೇವಾಪ್ರತಿನಿಧಿ ಪಾರ್ವತಿ ಮತ್ತಿತರರು ಇದ್ದರು.

ಯೋಜನೆ ವತಿಯಿಂದ ಅನಾರೋಗ್ಯ ಪೀಡಿತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿತರಿಸಲಾಗಿರುವ ವೀಲ್ ಚೇರನ್ನು ಕೂಡ ಹಸ್ತಾಂತರಿಸಲಾಯಿತು.