ವೀರಾಜಪೇಟೆ, ಜ. 18: ಹಿರಿಯ ನಾಗರಿಕರಿಗೆ ಇಲ್ಲಿನ ಕಂದಾಯ ಇಲಾಖೆಯಲ್ಲಿ ಅಧಿಕಾರಿ ಗಳು ಕಡತ ವಿಲೇವಾರಿ ಮಾಡಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಅರ್ಹ ಫಲಾನುಭವಿಗಳಿಗೆ ಸರಕಾರದ ಯೋಜನೆಯ ಪಿಂಚಣಿ ಮಂಜೂರು ಮಾಡದೆ ಕಡತಗಳನ್ನು ಹಾಗೆಯೇ ಉಳಿಸಿಕೊಂಡು ಸಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ಇಲ್ಲಿನ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಮಲ್ಲೇಂಗಡ ಶಂಕರಿ ಪೊನ್ನಪ್ಪ ಹೇಳಿದರು.

ವೀರಾಜಪೇಟೆಯ ಕಚೇರಿ ಸಭಾಂಗಣದಲ್ಲಿ ನಡೆದÀ ಕಾರ್ಯಕಾರಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಚೇರಿಯ ಕಡತ ವಿಲೇವಾರಿಗೆ ಸಂಬಂಧಿಸಿ ದಂತೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿತ್ತು. ಹಿರಿಯ ನಾಗರಿಕರಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಟ್ಟು ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯ ಗಳನ್ನು ನೀಡಬೇಕು. ರೋಗಿಗಳಿಗೆ ಕಡಿಮೆ ದರದಲ್ಲಿ ಸರಕಾರದ ಸಹಾಯ ಧನದಲ್ಲಿ ವಿತರಿಸುವ ಔಷಧಿ ಮಳಿಗೆಗಳನ್ನು ತಾಲೂಕು ಕೇಂದ್ರ ವೀರಾಜ ಪೇಟೆಯಲ್ಲಿ ತೆರೆಯುವಂತಾಗಬೇಕು ಎಂದರು.

ವೇದಿಕೆಯಲ್ಲಿ ಕಾರ್ಯದರ್ಶಿ ಪುಲಿಯಂಡ ಪೊನ್ನಪ್ಪ, ಸಮಿತಿ ಸದಸ್ಯರಾದ ಬಲ್ಲಡಿಚಂಡ ನಾಣಯ್ಯ, ಬೊಳ್ಳಚಂಡ ಕಾಳಪ್ಪ, ನೆಲ್ಲಚಂಡ ಭೀಮಯ್ಯ, ಪುಟ್ಟಿಚಂಡ ಐಯ್ಯಣ್ಣ, ಖಲಿಮುಲ್ಲಾ ಖಾನ್, ಪಾಲೇಕಂಡ ನಂಜಪ್ಪ ಉಪಸ್ಥಿತರಿದ್ದರು.