ಮಡಿಕೇರಿ, ಜ. 19: ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಸರ್ವೆ.ನಂ 1/1ರ ನವಗ್ರಾಮ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗದ ಮರಗಳನ್ನು ತೆರವುಗೊಳಿಸುವ ಬಗ್ಗೆ ಪ್ರಸ್ತಾವನೆ ಬಂದಿದ್ದು, ಈ ಬಗ್ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸೋಮವಾರಪೇಟೆ ಉಪ ವಿಭಾಗ ಹಾಗೂ ವಲಯ ಅರಣ್ಯಾಧಿಕಾರಿ, ಕುಶಾಲನಗರ ವಿವಿಧ ಜಾತಿಯ ಒಟ್ಟು 73 ಹಸಿನಿಂತ ಮರಗಳಿಂದ ಅಂದಾಜು 28.116 ಘ.ಮೀ. ಇರುವುದಾಗಿ ಹಾಗೂ ಸೌದೆಗೆ ಯೋಗ್ಯವಾದ ವಿವಿಧ ಜಾತಿಯ ಒಟ್ಟು 75 ಮರಗಳಿಂದ ಅಂದಾಜು 24.350 ಘ.ಮೀ. ಸೌದೆ ದೊರೆಯಬಹುದಾಗಿ ವರದಿ ನೀಡಿರುತ್ತಾರೆ.
ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ ನಿಯಮದಡಿ 50ಕ್ಕೂ ಹೆಚ್ಚಿನ ಮರಗಳನ್ನು ಯಾವುದೇ ಸಾರ್ವಜನಿಕ ಉದ್ದೇಶಕ್ಕೆ ತೆರವುಗೊಳಿಸುವುದಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯುವುದು ಅಗತ್ಯವಾಗಿರುತ್ತದೆ.
ಈ ಸಂಬಂಧ ತಾ. 23 ರಂದು ಬೆಳಿಗ್ಗೆ 11 ಗಂಟೆಗೆ ಮಡಿಕೇರಿ ಅರಣ್ಯ ಭವನ ಕಚೇರಿಯ 1ನೇ ಮಹಡಿ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಾಣಾಧಿಕಾರಿಯ ಕಚೇರಿಯನ್ನು ಸಂಪರ್ಕಿಸಬಹುದು.