ವಿವೇಕಾನಂದ ಜಯಂತಿ ಆಚರಣೆ

ಗೋಣಿಕೊಪ್ಪಲು, ಜ. 19: ಸ್ವಾಮಿ ವಿವೇಕಾನಂದರ 158ನೇ ಜನ್ಮದಿನೋತ್ಸವದ ಅಂಗವಾಗಿ ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದಲ್ಲಿ ಆಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪನಂದ ಇವರ ಅಧ್ಯಕ್ಷತೆಯಲ್ಲಿ ಭಜನೆ, ಉಪನ್ಯಾಸ, ಕೀರ್ತನೆಗಳು ನಡೆಯಿತು.

ಮುಂಜಾನೆಯಿಂದಲೇ ಮಂಗಳಾರತಿ, ಉಷಾ ಕೀರ್ತನೆ, ವಿಶೇಷ ಪೂಜೆ, ವೇದಪಠಣ, ಹೋಮ ಮಹಾಮಂಗಳಾರತಿ ನಡೆದವು. ಆಶ್ರಮದ ಅನುಯಾಯಿಗಳು, ಭಕ್ತಾದಿಗಳು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಆಶ್ರಮದ ಪ್ರಮುಖ ಸ್ವಾಮೀಜಿಗಳಾದ ಪರಹಿತನಂದ, ದೀಪಶಂಕರ್, ಸುಬಳ್, ಗೋಪೆಂದ್ರ, ಸುಬೋದ್ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗ ನಡೆಯಿತು.