ನಾಪೆÇೀಕ್ಲು, ಜ. 19 : ಎನ್.ಆರ್.ಸಿ. ಕಾಯಿದೆಯಿಂದ ದೇಶದ ಪ್ರಜಾಪ್ರಭುತ್ವವನ್ನು ರೂಪಿಸಿದ ದೇಶದ ನಾಯಕರಿಗೆ ಅಪಮಾನ ಮಾಡಿದಂತೆ; ಇದಕ್ಕೆ ದೇಶದ ನಾಗರಿಕರ ವಿರೋಧ ಇದೆ ಎಂದು ಖ್ಯಾತ ಅಂಕಣಕಾರ ಮೈಸೂರಿನ ದೀಪಕ್ ಹೇಳಿದರು. ಅವರು ನಾಪೆÇೀಕ್ಲು ಮಾರುಕಟ್ಟೆ ಆವರಣದಲ್ಲಿ ನಾಲ್ಕು ನಾಡು ಮುಸ್ಲಿಂ ಜಮಾಅತ್ ಒಕ್ಕೂಟದ ವತಿಯಿಂದ ನಾಪೆÇೀಕ್ಲು ಮಾರುಕಟ್ಟೆ ಬಳಿಯಲ್ಲಿ ಇಂದು ಆಯೋಜಿಸಲಾಗಿದ್ದ ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಸಂವಿಧಾನದ ಉಳಿವಿಗಾಗಿ ನಾವು ಈ ಕಾಯಿದೆಯನ್ನು ವಿರೋಧಿಸುವುದಾಗಿ ಹೇಳಿದ ಅವರು ನಮ್ಮದು ಪ್ರಜಾಪ್ರಭುತ್ವವನ್ನು ಹೊಂದಿದ ದೇಶವಾಗಿದ್ದು ನಮಗೆ ಸ್ವಾತಂತ್ರ್ಯ ಬಂದ ಸಂದರ್ಭ ಡಾ, ಬಿ.ಆರ್ ಅಂಬೇಡ್ಕರ್ ಮತ್ತು ಅವರ ಸಮಿತಿಯವರು ರಚಿಸಿದ ಸಂವಿಧಾನದಲ್ಲಿ ಜಾತ್ಯತೀತ ಮನೋಭಾವದ ಹಂಗಿನಲ್ಲಿ ಎಲ್ಲರೂ ಭಾರತೀಯರು ಎಂಬ ದೃಷ್ಠಿಯಲ್ಲಿ ಸರಕಾರ ರಚನೆಗೆ ಅವಕಾಶವನ್ನು ಕಲ್ಪಿಸಿದೆ. ಇಲ್ಲಿಯವರೆಗೆ ಯಾವುದೇ ತೊಂದರೆ ಇಲ್ಲದೆ ಇದ್ದ ಸಂದರ್ಭ ಕೇಂದ್ರ ಸರ್ಕಾರ ಸಂವಿಧಾನಕ್ಕೆ ಕಳಂಕ ತರುವ ಇಂತಹ ಕಾಯಿದೆಯನ್ನು ಜಾರಿಗೆ ತಂದು ಜಾತಿ ಜನಾಂಗಗಳ ಮಧ್ಯ ಸಂಘರ್ಷಕ್ಕೆ ಎಡೆಮಾಡಿದೆ ಎಂದು ಆರೋಪಿಸಿದ ಅವರು ಇಂತಹ ಕಾಯಿದೆಯನ್ನು ಕೇಂದ್ರ ಸರಕಾರ ಕೂಡಲೇ ಹಿಂಪಡೆದು ದೇಶದ ಅಭಿವೃದ್ಧಿಗೆ ಯೋಗ್ಯವಾಗುವ ಕಾನೂನನ್ನು ಜಾರಿಗೆ ತರಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ,ಮಾಜಿ ಜಿಲ್ಲಾ ಪರಿಷತ್ ಉಪಾಧ್ಯಕ್ಷ ಪಿ.ಎಂ.ಖಾಸಿಂರವರು ಮಾತನಾಡಿ ನಮ್ಮ ದೇಶ ಭಾರತ, ನಾವು ಭಾರತೀಯರು, ನಮ್ಮನ್ನು ಇಲ್ಲಿಂದ ಹೊರಗಟ್ಟಲು ಯಾರಿಗೂ ಸಾಧ್ಯವಿಲ್ಲ ಎಂದರು. ನಮ್ಮ ದೇಶ ಜಾತ್ಯತೀತ ದೇಶವಾಗಿದ್ದು ಜಾತಿ ವಿಚಾರದಲ್ಲಿ ನಮ್ಮನ್ನು ಯಾರೂ ಆಳುವುದು ಬೇಡ, ಈ ದೇಶದ ಚರಿತ್ರೆಯನ್ನು ನಾಯಕರು ಮೊದಲು ಅರ್ಥೈಸಿಕೊಂಡರೆ ಒಳ್ಳೆಯದು ಎಂದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಕಾರ್ಯಧ್ಯಕ್ಷ ಎಂ.ಹೆಚ್. ಅಬ್ದುಲ್ ರಹಿಮಾನ್, ಉಡುಪಿಯ ಬರಹಗಾರ ಹರ್ಷವರ್ಧನ್, ಕಾಂಗ್ರೆಸ್ ಪ್ರಮುಖ ನೆರವಂಡ ಉಮೇಶ್, ವಕೀಲ ಅಮೀನ್ ಮೋಹಿಸಿನ್, ಮಂಜುನಾಥ್ ಮಾತನಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಎಂ.ಎ. ಮನ್ಸೂರ್ ಆಲಿ. ಹಂಸ ಕೊಟ್ಟಮುಡಿ, ಮತ್ತಿತರರು ಇದ್ದರು ಹಮೀದ್ ಸ್ವಾಗತಿಸಿದರು. ಸಿ.ಹೆಚ್. ಅಹಮ್ಮದ್ ನಿರೂಪಿಸಿ, ವಂದಿಸಿದರು.