ಶ್ರೀಮಂಗಲ, ಜ. 19: ಪೊನ್ನಂಪೇಟೆಯ ಚಿಕ್ಕಮುಂಡೂರು ಗ್ರಾಮದಲ್ಲಿರುವ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ಮೈದಾನದಲ್ಲಿ ಕೊಡಗು ಬಾಕ್ಸಿಂಗ್ ಅಸೋಸಿ ಯೇಷನ್ ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ಬಾಕ್ಸಿಂಗ್ ಟೂರ್ನಮೆಂಟ್ನಲ್ಲಿ ವಿವಿಧ ವಿಭಾಗದಲ್ಲಿ ವಿಜೇತರಾದ ಕ್ರೀಡಾಪಟುಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆದು ಸಂಭ್ರಮಿಸಿದರು.
ಬಾಲಕಿಯರ 23 ರಿಂದ 26 ಕೆ.ಜಿ. ವಿಭಾಗದಲ್ಲಿ ಚಂದನ (ಚಿನ್ನ), ಬಬಿತ ಕೆ.ಟಿ (ಬೆಳ್ಳಿ), ಚಂದನ (ಕಂಚು) ಪಡೆದುಕೊಂಡರು.
29-32 ಕೆ.ಜಿ. ವಿಭಾಗದಲ್ಲಿ ಎ.ಪಿ. ರೋಸಿಕ (ಚಿನ್ನ), ಎಂ.ಪಿ. ಗಾಯಿತ್ರಿ (ಬೆಳ್ಳಿ), ಆಪ್ತಿ (ಕಂಚು), 35 - 38 ಕೆ.ಜಿ ವಿಭಾಗ ಕೆ.ಪಿ. ಸಮೀಕ್ಷ (ಚಿನ್ನ), ಕೃತಿ ಎಂ.ಪಿ. (ಬೆಳ್ಳಿ), ಪೂಜಿತ ಕೆ.ಕೆ. ಮತ್ತು ಡಯಾನ ಕೆ.ಬಿ. (ಜಂಟಿಯಾಗಿ) ಕಂಚಿನ ಪದಕ ಪಡೆದುಕೊಂಡರು.
38 ರಿಂದ 42 ಕೆ.ಜಿ. ವಿಭಾಗದಲ್ಲಿ ಯು.ಎನ್. ಮೋನಿಕ (ಚಿನ್ನ), ಯು.ಎನ್. ಅರ್ಚನ (ಬೆಳ್ಳಿ), ಎಂ.ಕೆ. ಭವ್ಯ ಮತ್ತು ಕೆ.ಎಂ. ವಿಸ್ಮ ಜಂಟಿಯಾಗಿ ಕಂಚಿನ ಪದಕ ಪಡೆದರು, 42 ರಿಂದ 46 ವಿಭಾಗದಲ್ಲಿ ಪಿ.ಯು. ರಕ್ಷಿತ (ಚಿನ್ನ), ಎ.ಸಿ. ವರ್ಷ (ಬೆಳ್ಳಿ), 61 ರಿಂದ 64 ಕೆ.ಜಿ. ವಿಭಾಗದಲ್ಲಿ ಪಿ.ಆರ್. ಅಭಿನಯ (ಚಿನ್ನ), ಪ್ರಜೂಲಾ ಎಂ.ಪಿ. (ಬೆಳ್ಳಿ), ಬಾಲಕರ ವಿಭಾಗದಲ್ಲಿ 26 ರಿಂದ 30 ಕೆ.ಜಿ. ಪಿ. ಜನನ್ (ಚಿನ್ನ), ಪಿ. ಕವನ್ (ಬೆಳ್ಳಿ).
29 ರಿಂದ 33 ಕೆ.ಜಿ. ರೋಮಿತ್ ತಿಮ್ಮಯ್ಯ (ಚಿನ್ನ), ಪಿ.ಯು. ಹರ್ಷ (ಬೆಳ್ಳಿ), ಎಂ.ಪಿ. ಬೋಪಣ್ಣ ಮತ್ತು ಯು.ಆರ್. ಮಂದಣ್ಣ ಜಂಟಿಯಾಗಿ ಕಂಚು ಪದಕ ಪಡೆದುಕೊಂಡರು.
36-39 ಕೆ.ಜಿ. ರಾಜೇಶ್ (ಚಿನ್ನ), ರಾಹುಲ್ ಆರ್. ಗೌಡ (ಬೆಳ್ಳಿ), ಕೃತಿಕ್ ಮಂದಣ್ಣ ಟಿ.ಬಿ. ಮತ್ತು ಕೆ.ಜೆ. ಪವನ್ ಜಂಟಿಯಾಗಿ ಕಂಚಿನ ಪದಕ ಪಡೆದುಕೊಂಡರು. 39-43 ಕೆ.ಜಿ.ಯಲ್ಲಿ ಮಂದಣ್ಣ ಎ.ಪಿ (ಚಿನ್ನ), ಪಿ.ಎಸ್. ಕಾರ್ತಿಕ್ (ಬೆಳ್ಳಿ), ಮನೋಜನ್ (ಕಂಚು), 43-46 ಕೆ.ಜಿ.ಯಲ್ಲಿ ಶಶಾಂಕ್ ಗೌಡ (ಚಿನ್ನ), ಎಂ. ಸಮುವೆಲ್ಲ್ (ಬೆಳ್ಳಿ), ಕೃತಿಕ್ಗೌಡ ಮತ್ತು ವಿಶ್ರಾಂತ್ ಗೌಡ ಜಂಟಿಯಾಗಿ ಕಂಚಿನ ಪದಕ ಪಡೆದುಕೊಂಡರು.
49-52 ಕೆ.ಜಿ. ಉಲ್ಲಾಸ್ (ಚಿನ್ನ), ಗಗನ್ (ಬೆಳ್ಳಿ), ವೈ.ಆರ್. ರಂಜನ್ ಮತ್ತು ಲೀತನ್ ಬಿದ್ದಪ್ಪ ಜಂಟಿಯಾಗಿ ಕಂಚಿನ ಪದಕ ಪಡೆದರು. 52-55 ಕೆ.ಜಿ.ಯಲ್ಲಿ ಸೋಮಯ್ಯ (ಚಿನ್ನ), ತಿಮ್ಮಯ್ಯ (ಬೆಳ್ಳಿ), ಸಾಯಿದರ್ಶನ್ ಮತ್ತು ಮಂಜು ಜಂಟಿಯಾಗಿ ಕಂಚಿನ ಪದಕ ಪಡೆದರು. 60-64 ಕೆ.ಜಿ.ಯಲ್ಲಿ ಅಜಯ್ (ಚಿನ್ನ) ಅನಿಲ್ (ಬೆಳ್ಳಿ), 48-50 ಕೆ.ಜಿ ಯಲ್ಲಿ ಉಲ್ಲಾಸ್ ಗೌಡ (ಚಿನ್ನ), ಎಂ.ಯು. ಗಗನ್ (ಬೆಳ್ಳಿ), ಲಿತನ್ ಬಿದ್ದಪ್ಪ ಮತ್ತು ರಂಜನ್ ಜಂಟಿಯಾಗಿ ಕಂಚಿನ ಪದಕ ಪಡೆದರು.
ಟೂರ್ನಮೆಂಟ್ನಲ್ಲಿ ಅತ್ಯುತ್ತಮ ಬಾಕ್ಸರ್ ಎಂದು ಹೊರಹೊಮ್ಮಿದ ರೋಮಿತ್ ತಿಮ್ಮಯ್ಯ ಅವರು ಟ್ರೋಫಿ ಹಾಗೂ ಭವಿಷ್ಯದ ಅತ್ಯುತಮ ಬಾಕ್ಸರ್ ಪಟು ಎಂದು ಯು.ಎನ್. ಮಂದಣ್ಣ ಟ್ರೋಫಿಯೊಂದಿಗೆ ಪ್ರಶಸ್ತಿ ಪತ್ರ ಪಡೆದರು. ಟೂರ್ನಮೆಂಟ್ನಲ್ಲಿ ಬಾಲಕಿಯರ ವಿಭಾಗದಲ್ಲಿ ಅತ್ಯುತ್ತಮ ಬಾಕ್ಸರ್ ಎಂದು ಹೊರಹೊಮ್ಮಿದ ಮೋನಿಕ ಅವರು ಟ್ರೋಫಿ ಹಾಗೂ ಭವಿಷ್ಯದ ಅತ್ಯುತಮ ಬಾಕ್ಸರ್ ಪಟು ಎಂದು ವರ್ಷ ಟ್ರೋಫಿಯೊಂದಿಗೆ ಪ್ರಶಸ್ತಿ ಪತ್ರ ಪಡೆದರು.
ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಕರ್ನಾಟಕ ರಾಜ್ಯ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಚೇನಂಡ ಸಿ. ಮಾಚಯ್ಯ, ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಚೋಂದಂಡ ಅಯ್ಯಪ್ಪ, ಕಾರ್ಯದರ್ಶಿ ಚೆಪ್ಪುಡೀರ ಮುತ್ತಣ್ಣ, ಪೊನ್ನಂಪೇಟೆ ಸಾಯಿಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೋಳೆರ ಝರು ಗಣಪತಿ ಮತ್ತು ಕೂರ್ಗ್ವೆಲ್ನೆಸ್ ಫೌಂಡೇಷನ್ನ ಸ್ಥಾಪಕಿ ನಿಕ್ಕಿಪೊನ್ನಪ್ಪ ಅವರು ನೀಡಿದರು.