ಮಡಿಕೇರಿ, ಜ. 19: ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲತೆ ಕಲ್ಪಿಸುವ ದಿಸೆಯಲ್ಲಿ; ಜಿಲ್ಲಾ ಸರಕಾರಿ ಆಸ್ಪತ್ರೆಯನ್ನು 750 ಹಾಸಿಗೆಗಳ ಸಾಮಥ್ರ್ಯದ ಕಟ್ಟಡ ನಿರ್ಮಿಸಲು; ಈ ಆವರಣಕ್ಕೆ ಹೊಂದಿ ಕೊಂಡಿರುವ 21 ವಸತಿಗೃಹಗಳ ತೆರವಿಗೆ ಆದೇಶಿಸಲಾಗಿದೆ. ಹೀಗಿದ್ದರೂ ಸಂಬಂಧಿಸಿದ ವಸತಿಗಳನ್ನು ಕೆಲವು ವೈದ್ಯ - ಸಿಬ್ಬಂದಿ ಖಾಲಿ ಮಾಡಿಲ್ಲ ಎಂದು ತಿಳಿದು ಬಂದಿದೆ.ಈಗಾಗಲೇ ಜಿಲ್ಲಾ ಆಸ್ಪತ್ರೆಯಲ್ಲಿ 300 ಹಾಸಿಗೆಗಳ ಸಾಮಥ್ರ್ಯ ದೊಂದಿಗೆ; ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 750 ಹಾಸಿಗಳಿಗೆ ವಿಸ್ತರಿಸಲು ಕರ್ನಾಟಕ ಸರಕಾರವು ಕ್ರಮ ಕೈಗೊಂಡು; ನೂತನವಾಗಿ 450 ಹಾಸಿಗೆಗಳ ಕಟ್ಟಡ ನಿರ್ಮಾಣಕ್ಕೆ ರೂ. 100 ಕೋಟಿ ಹಣವನ್ನು ಬಿಡುಗಡೆಗೊಳಿಸಿದ್ದು; ಸಂಬಂಧಿಸಿದ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ಪೂರೈಸಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖಾಂತರ ಗುತ್ತಿಗೆ ಕಾಮಗಾರಿ ಕೈಗೊಂಡಿದೆ.
ಅಲ್ಲದೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ತೃತೀಯ ವರ್ಷದ ಶಿಕ್ಷಣದೊಂದಿಗೆ; ಎಲ್ಲ 750 ವಿದ್ಯಾರ್ಥಿಗಳಿಗೆ ಕಲಿಕಾ ಚಟುವಟಿಕೆಗೆ ಪೂರಕ 450 ಹಾಸಿಗೆಗಳ ಹೆಚ್ಚುವರಿ ಕಟ್ಟಡ ಕಾಮಗಾರಿಯನ್ನು 18 ರಿಂದ 24 ತಿಂಗಳ ಅವಧಿಯೊಳಗೆ ಪೂರ್ಣಗೊಳಿಸಲು ಆದೇಶಿಸಲಾಗಿದೆ. 2014 ರಿಂದ ಈ ಪ್ರಕ್ರಿಯೆಗೆ ಚಾಲನೆ ಲಭಿಸಿದ್ದು; ಸಂಬಂಧಿಸಿದ ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ಚಟುವಟಿಕೆಗೆ ಸಮಸ್ಯೆ ಎದುರಾಗುವ ಆತಂಕ ಕೊಡಗು ವೈದ್ಯಕೀಯ
(ಮೊದಲ ಪುಟದಿಂದ) ವಿಜ್ಞಾನ ಸಂಸ್ಥೆಗೆ ಕಾಡತೊಡಗಿದೆ.
ವೈದ್ಯ - ಸಿಬ್ಬಂದಿಗೆ ಕಿರಿ ಕಿರಿ : ಈ ಪ್ರಕ್ರಿಯೆಯಿಂದ ಪ್ರಸ್ತುತ ವಸತಿಗೃಹಗಳಲ್ಲಿ ವಾಸವಿರುವ ವೈದ್ಯ-ಸಿಬ್ಬಂದಿ ಕಿರಿಕಿರಿ ಅನುಭವಿಸುತ್ತಿರುವ ಆರೋಪವಿದೆ. ಕಾರಣ ಮೇಲಿಂದ ಮೇಲೆ ವಸತಿಗಳನ್ನು ಖಾಲಿಗೊಳಿಸುವಂತೆ ನೋಟೀಸ್ ನೀಡಲಾಗುತ್ತಿದ್ದರೂ; ಕೆಲವರು ತಮ್ಮ ಮಕ್ಕಳ ವಿದ್ಯಾಭ್ಯಾಸ ಇನ್ನಿತರ ಕಾರಣ ನೀಡಿ ತಾವಿರುವ ವಸತಿಗಳನ್ನು ಬಿಟ್ಟುಕೊಡಲು ಹಿಂಜರಿಯುತ್ತಿದ್ದಾರೆ.
ಪರಿಣಾಮ ಸಂಬಂಧಿಸಿದ ಕಟ್ಟಡ ಕಾಮಗಾರಿ ವಿಳಂಬವಾಗುವ ದರೊಂದಿಗೆ; ಗುತ್ತಿಗೆದಾರರಿಗೆ ನೀಡಲಾಗಿರುವ ಹೊಸ ಕಟ್ಟಡ ಕೆಲಸದ ಕಾಲಮಿತಿಯೂ ಮೀರುವಂತಾಗಿದೆ ಎಂದು ವೈದ್ಯಕೀಯ ವಿಜ್ಞಾನ ಸಂಸ್ಥೆ ಮುಖ್ಯಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.
ಮುಗಿದ ಗಡುವು : ಈಗಾಗಲೇ ಅನೇಕ ಬಾರಿ ಸಂಬಂಧಿಸಿದ ವಸತಿ ನಿವಾಸಿಗಳಿಗೆ ನೀಡಿರುವ ನೋಟೀಸ್ಗೆ ಸ್ಪಂದಿಸದಿರುವ ಕಾರಣ ಅಂತಿಮವಾಗಿ ಇದೇ ತಾ. 15ಕ್ಕೆ ಕಾಲಾವಕಾ&divlusmn; Àದೊಂದಿಗೆ ನೋಟೀಸ್ ಅನ್ನು ಮತ್ತೊಂದು ಸಲ ನೀಡಲಾಗಿದೆ. ಈ ಬಗ್ಗೆ ವಸತಿಯಲ್ಲಿರುವ ಮಂದಿ ತಮ್ಮ ಮಕ್ಕಳ ಶೈಕ್ಷಣಿಕ ವಾರ್ಷಿಕ ಪರೀಕ್ಷೆ ಮುಗಿಯುವ ತನಕ ಕಾಲಾವಕಾಶಕ್ಕಾಗಿ ದುಂಬಾಲು ಬಿದ್ದಿದ್ದಾರೆ.ಹೀಗೆ ವಿಳಂಬ ನೀತಿ ಅನುಸರಿಸಿದರೆ ಮಳೆಗಾಲ ಎದುರಾಗಲಿದ್ದು; ಆ ಸಮಯ ಕಟ್ಟಡ ಕಾಮಗಾರಿಗೆ ತೊಂದರೆ ಎದುರಾಗುವದರೊಂದಿಗೆ; ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೂ ತೊಡಕು ಎದುರಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತೆರವುಗೊಳಿಸಲಿರುವ ಕಟ್ಟಡಕ್ಕೆ 20 ವರ್ಷಗಳು ಆಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.