ಮಡಿಕೇರಿ, ಜ. 16: ಬೆಂಗಳೂರಿನ ಅಲಸೂರು ಸೆಂಟ್ ಆನ್ಸ್ ಡಿಗ್ರಿ ಕಾಲೇಜು ವ್ಯವಸ್ಥಾಪಕರು, ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಸೇರಿ ವಿದ್ಯಾರ್ಥಿಗಳ ಸಹಯೋಗ ದೊಂದಿಗೆ ಪ್ರಕೃತಿ ವಿಕೋಪಕ್ಕೆ ತುತ್ತಾದ ನೊಂದ 39 ಮಂದಿಗೆ ತಲಾ ಹತ್ತು ಸಾವಿರದಂತೆ ಮೂರು ಲಕ್ಷದ ತೊಂಬತ್ತು ಸಾವಿರ ರೂಪಾಯಿಗಳನ್ನು ಮಡಿಕೇರಿ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಮಡಿಕೇರಿ ಲಯನ್ಸ್‍ಕ್ಲಬ್‍ನಲ್ಲಿ ವಿತರಿಸಲಾಯಿತು.

ಕಾಲೇಜಿನ ವ್ಯವಸ್ಥಾಪಕರಾದ ಸಿಸ್ಟರ್ ಮಾರ್ಗರೇಟ್ ಜೂಲಿ ಮಾತನಾಡಿ, ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ನೊಂದವರಿಗೆ ಸ್ಪಂದಿಸಲು ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳ ಮುಖಾಂತರ ಹಣ ಸಂಗ್ರಹಿಸಿದ್ದರು. ಸಂಗ್ರಹಿಸಿದ ಹಣವನ್ನು ವಿತರಿಸಲು ರೇ| ಫಾ|| ಸಂತೋಷ್ ಅವರನ್ನು ಸ್ಪಂದಿಸಿದಾಗ ಅವರ ಮಾರ್ಗದರ್ಶನದಂತೆ ಮಡಿಕೇರಿಯಲ್ಲಿ ಫಲಾನುಭವಿಗಳನ್ನು ಗುರುತಿಸಿ 39 ಮಂದಿಗೆ ತಲಾ ಹತ್ತು ಸಾವಿರದಂತೆ ವಿತರಿಸಲು ನೆರವಾಯಿತು. ನೊಂದವರಿಗೆ ಸಣ್ಣದಾದ ಸಹಾಯವನ್ನಾದರೂ ನೀಡಲು ಸಾಧ್ಯವಾಗಿದ್ದಕ್ಕೆ ದೇವರಿಗೆ ಸ್ತೋತ್ರ ಸಲ್ಲಿಸಿದರು.

ರೆ| ಫಾ|| ಸಂತೋಷ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ನಿಶಾ ಜೋಸೆಫ್, ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಹಾಜರಿದ್ದರು.

ಲಯನ್ಸ್ ಕ್ಲಬ್ ಸದಸ್ಯ ಕೆ.ಟಿ. ಬೇಬಿಮ್ಯಾಥ್ಯು ಅವರ ಮಾರ್ಗದರ್ಶ ನದಂತೆ ಫಲಾನುಭವಿ ಗಳನ್ನು ಗುರುತಿಸಿ ಸೌಲಭ್ಯಗಳನ್ನು ವಿತರಿಸಲಾಯಿತು.

ಲಯನ್ಸ್ ಕ್ಲಬ್ ಮಡಿಕೇರಿ ಅಧ್ಯಕ್ಷ ಮೋಹನ್, ಅಂಬೆಕಲ್ ನವೀನ್ ಉಪಸ್ಥಿತರಿದ್ದರು. ಕೆ.ಟಿ. ಬೇಬಿ ಮ್ಯಾಥ್ಯು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮಧುಕರ್ ಕೆ. ವಂದಿಸಿದರು.