ಶನಿವಾರಸಂತೆ, ಜ. 17: ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ರಸ್ತೆಯ ಎಡ-ಬಲ ಬದಿಗಳಲ್ಲಿ ವಾಹನ ನಿಲುಗಡೆಯ ನೂತನ 2 ಫಲಕಗಳನ್ನು ರೋಟರಿ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯೂ ಅನಾವರಣಗೊಳಿಸಿದರು. ನಂತರ ಸಮುದಾಯ ಆರೋಗ್ಯ ಕೇಂದ್ರದಲ್ಲೂ ಸಾರ್ವಜನಿಕರಿಗೆ ಉಚಿತ ಟಿಟಿ ಚುಚ್ಚುಮದ್ದು ಹಾಕುವ ಕಾರ್ಯಕ್ರಮವನ್ನು ಜೋಸೆಫ್ ಮ್ಯಾಥ್ಯೂ ಉದ್ಘಾಟಿಸಿದರು. 50 ಮಂದಿ ಚುಚ್ಚು ಮದ್ದು ಹಾಕಿಸಿಕೊಂಡರು. ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಪಿ. ನಾಗೇಶ್, ವಲಯ ಕಾರ್ಯದರ್ಶಿ ಎಚ್.ಟಿ. ಅನಿಲ್, ವಲಯ ಸೇನಾನಿ ಎಚ್.ಎಸ್. ವಸಂತಕುಮಾರ್, ಶನಿವಾರಸಂತೆ ರೋಟರಿ ಸಂಸ್ಥೆಯ ಅಧ್ಯಕ್ಷ ಎಸ್.ವಿ. ಶುಭು, ಕಾರ್ಯದರ್ಶಿ ಎಚ್.ಪಿ. ಚಂದನ್, ನಿಕಟಪೂರ್ವ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್, ಕಾರ್ಯದರ್ಶಿ ಎ.ಡಿ. ಮೋಹನ್ ಕುಮಾರ್, ಅರವಿಂದ್, ದಿವಾಕರ್, ಮೋಹನ್ ಮತ್ತಿತರರು ಹಾಜರಿದ್ದರು.