ಕುಶಾಲನಗರ, ಜ. 17: ಎರಡನೇ ವರ್ಷದ ಸಂಕ್ರಾಂತಿ ಸಂಭ್ರಮ-ಸಾರ್ವಜನಿಕರ ಕ್ರೀಡಾಕೂಟ 2020 ತಾ. 19 ರಂದು ಹಮ್ಮಿಕೊಳ್ಳಲಾಗಿದೆ ಎಂದು ಉದ್ಯಮಿ, ಸಮಾಜ ಸೇವಕ ಉಮಾಶಂಕರ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ ಅವರು, ಜನಪದ ಸೊಗಡಿನ ಕ್ರೀಡಾಕೂಟಗಳ ಬಗ್ಗೆ ಯುವ ಪೀಳಿಗೆಗೆ ಪರಿಚಯಿಸುವುದರೊಂದಿಗೆ ಮತ್ತಷ್ಟು ಜನಪ್ರಿಯಗೊಳಿಸುವ ಸದ್ದುದ್ದೇಶ ಹೊಂದಲಾಗಿದೆ. ಸಾರ್ವಜನಿಕರು ಒಗ್ಗೂಡಿ ಕ್ರೀಡಾಕೂಟದಲ್ಲಿ ಪಾಲ್ಗೊಂಡು ದೇಶೀಯ ಕ್ರೀಡೆಗಳನ್ನು ಪ್ರೋತ್ಸಾಹಿಸುವುದೊಂದಿಗೆ ಸಾಮರಸ್ಯ ವೃದ್ಧಿಗೆ ಕೈಜೋಡಿಸುವಂತಾಗಬೇಕಿದೆ.

ಈ ನಿಟ್ಟಿನಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಕೂಡ ಬೈಪಾಸ್ ರಸ್ತೆಯಲ್ಲಿರುವ ವಾಸವಿ ಮಹಲ್ ಮುಂಭಾಗದ ಮೈದಾನದಲ್ಲಿ ಸಾರ್ವಜನಿಕರಿಗೆ ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಕ್ರೀಡೆಯಾದ, ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು, ತೆಂಗಿನಕಾಯಿ ಒಡೆಯುವುದು,ನಿಧಾನ ದ್ವಿಚಕ್ರ ವಾಹನ ಚಲಿಸುವ ಸ್ಪರ್ಧೆ, ಚಿಕ್ಕಮಕ್ಕಳಿಗೆ ಸೈಕಲ್ ಸ್ಪರ್ಧೆ ಮತ್ತು ಇನ್ನಿತರ ಕ್ರೀಡೆಗಳು ಆಯೋಜಿಸ ಲಾಗಿದೆ. ಎಲ್ಲಾ ಸ್ಪರ್ಧೆಗಳಿಗೆ ಆಕರ್ಷಕ ಬಹುಮಾನ ಮತ್ತು ಭಾಗವಹಿಸಿದ ಜನರಿಗೆ ಲಕ್ಕಿ ಡಿಪ್ ಮೂಲಕ 10 ಅದೃಷ್ಟಶಾಲಿ ವ್ಯಕ್ತಿಗಳಿಗೆ 10 ಗ್ರಾಂ ಬೆಳ್ಳಿ ನಾಣ್ಯ ಮತ್ತು 5 ಅದೃಷ್ಟಶಾಲಿ ವ್ಯಕ್ತಿಗಳಿಗೆ ವಿ-ಗಾರ್ಡ್ ಮಿಕ್ಸಿ ಬಹುಮಾನವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು.