ಕೂಡಿಗೆ, ಜ. 16: ಕೂಡುಮಂಗಳೂರು ಸಮೀಪದ ಕೂಡ್ಲೂರಿನ ಮಾವಿನತೋಪಿನ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ.ಮುಳ್ಳುಸೋಗೆಯ ದಿ. ಸ್ವಾಮಿ ಎಂಬವರ ಪುತ್ರ ಎಂ.ಎಸ್. ಅಜಯ್ (22) ಮೃತ ಯುವಕ. ಮುಳ್ಳುಸೋಗೆಯಿಂದ ಕೂಡಿಗೆಯತ್ತ ದ್ವಿಚಕ್ರ ವಾಹನದಲ್ಲಿ (ಕೆಎ.12.ಎಸ್.0063) ತೆರಳುತ್ತಿದ್ದ ಸಂದರ್ಭ ಕೂಡಿಗೆ ಕಡೆಯಿಂದ ಬಂದ ಇಂಡಿಗೋ ಕಾರಿಗೆ (ಕೆಎ.12.ಬಿ.0048) ಬೈಕ್ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅಜಯ್‍ನನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸುವ ಸಂದರ್ಭ ಮೃತಪಟ್ಟಿದ್ದಾನೆ.
ಮೃತ ಯುವಕ ಕುಶಾಲನಗರದ ಹೊಟೇಲ್‍ವೊಂದರಲ್ಲಿ ರಿಸಪ್ಷನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕ ಪಿರಿಯಾಪಟ್ಟಣದ ರಮೇಶ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.