ಮಡಿಕೇರಿ, ಜ.17: ಕಾವೇರಿ ಪದವಿ ಕಾಲೇಜು ಗೋಣಿಕೊಪ್ಪಲು ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್ ರಿಬ್ಬನ್ ಕ್ಲಬ್ನ ಸಹಯೋಗದಲ್ಲಿ ರಕ್ತದಾನ ಶಿಬಿರವು ತಾ. 18 ರಂದು (ಇಂದು) ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. 18 ವರ್ಷ ತುಂಬಿದ 55 ಕೆ.ಜಿ.ತೂಕ ಇರುವ ಯುವಜನರು ರಕ್ತದಾನ ಮಾಡಬಹುದು. ಕಾವೇರಿ ಕಾಲೇಜಿನ ಆವರಣದಲ್ಲಿ ನಡೆಯುವ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ರಕ್ತದಾನ ಮಾಡಬಹುದು. ಆಸಕ್ತರು ಎನ್.ಎಸ್.ಎಸ್ ಅಧಿಕಾರಿ ಮಂದೆಯಂಡ ವನಿತ್ ಕುಮಾರ್ ಅವರನ್ನು ಸಂರ್ಪಕಿಸಬಹುದು. ದೂರವಾಣಿ ಸಂಖ್ಯೆ 9880504208.