ಮಡಿಕೇರಿ, ಜ. 16: ಕೊಡಗು ಜಿಲ್ಲಾ ಅನುದಾನರಹಿತ ಶಾಲಾ ಆಡಳಿತ ಸಂಘದ ವಿಶೇಷ ಸಭೆ ತಾ. 20 ರಂದು ಬೆ. 10.30ಕ್ಕೆ ಕುಶಾಲನಗರ ಉದ್ಗಂ ಶಾಲಾ ಆವರಣದಲ್ಲಿ ನಡೆಯಲಿದೆ. ಅನುದಾನ ರಹಿತ ಶಾಲೆಗಳ ಬಗ್ಗೆ ಸರಕಾರ ಇತ್ತೀಚಿನ ಆದೇಶಗಳ ಕುರಿತಾಗಿ ಈ ಸಭೆಯನ್ನು ಕರೆಯಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕೋಟ್ರಂಗಡ ತಿಮ್ಮಯ್ಯ ಅವರು ತಿಳಿಸಿದ್ದಾರೆ.